ಮಂಗಳವಾರ, ಸೆಪ್ಟೆಂಬರ್ 21, 2021
21 °C

ಹುಣಸೂರು: ಕಾಡಾನೆಗಳನ್ನು ಓಡಿಸುವ ವೇಳೆ ಆಘಾತ; ಅರಣ್ಯ ಇಲಾಖೆಯ ವಾಚರ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಇಲ್ಲಿನ ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಅರಣ್ಯ ಇಲಾಖೆಯ ವಾಚರ್ ಹನುಮಂತಯ್ಯ (56) ಅವರು ಸೋಮವಾರ ನಸುಕಿನಲ್ಲಿ ಕಾಡಾನೆಗಳನ್ನು ಓಡಿಸುವ ವೇಳೆ ಆಘಾತಕ್ಕೆ ಒಳಗಾಗಿ  ಮೃತಪಟ್ಟಿದ್ದಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ನಂಜಯ್ಯನ ಕಾಲೊನಿ ನಿವಾಸಿಯಾಗಿರುವ ಇವರು ಹುಣಸೂರಿನ ವೀರನಹೊಸಹಳ್ಳಿ ವಲಯದ ಸೊಳ್ಳೇಪುರ ಹಾಡಿ ಸಮೀಪ ತಮ್ಮ ಇಬ್ಬರು ವಾಚರ್‌ಗಳೊಂದಿಗೆ ಭಾನುವಾರ ರಾತ್ರಿ ಕಾವಲಿನಲ್ಲಿದ್ದರು. 

ದ್ಯಾವಪ್ಪ ಎಂಬುವವರ ಜಮೀನಿನ ಬಳಿ ಆನೆಗಳು ಬಂದಿವೆ ಎಂಬ ಮಾಹಿತಿ ಮೇರೆಗೆ ಆನೆಗಳನ್ನು ಓಡಿಸಲು ಇವರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಎಸಿಎಫ್ ಸತೀಶ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು