ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಪುಟ್ಟರಾಜು ಮನೆ ಮೇಲೆ ಐಟಿ ದಾಳಿ

Last Updated 28 ಮಾರ್ಚ್ 2019, 7:21 IST
ಅಕ್ಷರ ಗಾತ್ರ

ಮೈಸೂರು:ಮಂಡ್ಯ ಜಿಲ್ಲೆ ಉಸ್ತುವಾರಿಸಚಿವರೂ ಆಗಿರುವ ಸಣ್ಣ ನೀರಾವರಿ ಇಲಾಖೆ ಸಚಿವ ಸಿ.ಎಸ್.ಪುಟ್ಟರಾಜು ಅವರ ಮೈಸೂರು ಹಾಗೂ ಮಂಡ್ಯ ನಗರಗಳನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಗುರುವಾರ ಮುಂಜಾನೆ 5.30ರ ಸುಮಾರಿಗೆ ದಾಳಿ ನಡೆಸಿದ್ದಾರೆ. ಪುಟ್ಟರಾಜು ಅವರ ಬಹುಪಾಲು ವ್ಯವಹಾರಗಳನ್ನು ನಿರ್ವಹಿಸುವ ಸಂಬಂಧಿ (ಅಣ್ಣನ ಮಗ) ಹಾಗೂ ಮಂಡ್ಯ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಅಶೋಕ್ ಅವರ ನಿವಾಸದ ಮೇಲೆಯೂ ಆದಾಯ ತೆರಿಗೆ ಇಲಾಖೆಅಧಿಕಾರಿಗಳದಾಳಿ ನಡೆದಿದೆ.

ಮೈಸೂರಿನವಿಜಯನಗರದಲ್ಲಿರುವ ಅಶೋಕ್ ಅವರ ನಿವಾಸದಲ್ಲಿ ಹತ್ತಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಪುಟ್ಟರಾಜು ಅವರ ಬಹುಪಾಲು ವ್ಯವಹಾರಗಳನ್ನು ಅಶೋಕ್ ಅವರೇ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ನಾಲ್ಕು ಕಾರುಗಳಲ್ಲಿಬಂದಿರುವ ಐಟಿ ಅಧಿಕಾರಿಗಳುಸಿ.ಆರ್.ಪಿ.ಎಫ್. ಸಿಬ್ಬಂದಿಯ ಭದ್ರತೆಯಲ್ಲಿ ದಾಳಿ ನಡೆಸಿದರು.

‘ಆದಾಯ ತೆರಿಗೆ ಇಲಾಖೆ ಅಧಿಕಾರಿಮೂರು ತಂಡಗಳು ಮತ್ತು ಸಿಆರ್‌ಪಿಎಫ್‌ ಪೊಲೀಸರು ನನ್ನಚಿನಕುರಳಿ (ಪಾಂಡವಪುರತಾಲ್ಲೂಕು) ಮತ್ತು ಮೈಸೂರಿನಲ್ಲಿರುವ ನನ್ನ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಿದ್ದಾರೆ’ ಎಂದು ಪುಟ್ಟರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಯಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಮತ್ತು ಕನ್ನಡದ ಸ್ಟಾರ್‌ನಟರ ಬೆಂಬಲದೊಂದಿಗೆ ಕಣಕ್ಕಿಳಿದಿರುವ ಸುಮಲತಾ ಅವರಿಂದ ಜಿದ್ದಿನ ಪೈಪೋಟಿ ಎದುರಾಗಿದೆ. ಮಂಡ್ಯದಿಂದ ನಿಖಿಲ್‌ ಗೆಲ್ಲಿಸುವ ಹೊಣೆಯನ್ನು ಪುಟ್ಟರಾಜು ಅವರಿಗೆ ಕುಮಾರಸ್ವಾಮಿ ವಹಿಸಿದ್ದರು.

ಇದೆಲ್ಲಾ ರಾಜಕೀಯ: ಪುಟ್ಟರಾಜು

‘ಮಂಡ್ಯದಲ್ಲಿ ಐಟಿರಾಜಕೀಯ ಮಾಡಿ ನನ್ನನ್ನು ಕಟ್ಟಿಹಾಕಬಹುದು, ಚುನಾವಣೆ ಗೆಲ್ಲಬಹುದು ಅಂತ ಬಿಜೆಪಿ ಅಂದುಕೊಂಡಿದ್ದರೆ ಅದು ಭ್ರಮೆ. ಅದೆಲ್ಲಾ ಇಲ್ಲಿ ನಡೆಯೋಲ್ಲ. ನಮ್ಮ ಕಾರ್ಯಕರ್ತರು ಪ್ರತಿಭಟಿಸಲುಸಿದ್ಧರಾಗಿದ್ದಾರೆ. ನಾನೇ ಅವರನ್ನು ತಡೆದು ನಿಲ್ಲಿಸಿದ್ದೇನೆ. ಕಾನೂನಿನ ಪ್ರಕಾರ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿ. ನಾನು ಸಹಕರಿಸುತ್ತೇನೆ. ಇವತ್ತಿನಿಂದ ಮಂಡ್ಯ ಚುನಾವಣೆಯ ರಂಗು ಬದಲಾಗಲಿದೆ ಗಮನಿಸಿ. ನಮ್ಮ ಕಾರ್ಯಕರ್ತರು ಹುಲಿಗಳ ಥರ ಬೀದಿಗೆ ಇಳೀತಾರೆ. ಧೈರ್ಯವಿದ್ದವರು ಕಟ್ಟಿಹಾಕಲಿ ನೋಡೋಣ. ಇಂಥದ್ದೊಂದು ಅವಕಾಶ ನೀಡಿದ್ದಕ್ಕೆ ಐಟಿ ಅಧಿಕಾರಿಗಳಿಗೆ ನಾನು ಕೃತಜ್ಞನಾಗಿರುತ್ತೇನೆ’ ಎಂದು ಪುಟ್ಟರಾಜು ಮಂಡ್ಯದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ನಿನ್ನೆಯೇ ಎಚ್ಚರಿಸಿದ್ದ ಕುಮಾರಸ್ವಾಮಿ

ಕಾಂಗ್ರೆಸ್‌ ಮತ್ತುಜೆಡಿಎಸ್ ನಾಯಕರು ಮತ್ತು ಬೆಂಬಲಿಗರನಿವಾಸಗಳ ಮೇಲೆ ಗುರುವಾರಐಟಿ ದಾಳಿ ನಡೆಯಬಹುದು ಎಂದು ಎಚ್‌.ಡಿ.ಕುಮಾರಸ್ವಾಮಿ ನಿನ್ನೆಯಷ್ಟೇ ಎಚ್ಚರಿಸಿದ್ದರು. ದಾಳಿಯನ್ನು ಗೌಪ್ಯವಾಗಿಡಲೆಂದು ರಾಜ್ಯ ಪೊಲೀಸ್ ಇಲಾಖೆಯನ್ನು ದೂರ ಇರಿಸಿ,ದೇಶದ ವಿವಿಧೆಡೆಯಿಂದ ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಕರೆಸಲಾಗಿದೆ ಎಂದು ಹೇಳಿದ್ದರು.

ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ಮತ್ತು ಅಧಿಕಾರಿಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಂಡರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟಿಸಿದಂತೆ ನಾನೂ ಪ್ರತಿಭಟಿಸಬೇಕಾದೀತು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಎಚ್ಚರಿಸಿದ್ದರು.

ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆಕೊಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್‌ ಕುಮಾರ್ ಅವರನ್ನು ಪ್ರಶ್ನಿಸಲು ಸಿಬಿಐ ಯತ್ನಿಸಿತ್ತು. ಇದನ್ನು ವಿರೋಧಿಸಿ ಫೆ.3ರಿಂದ 5ರವರೆಗೆ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದರು.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT