ಶುಕ್ರವಾರ, ಅಕ್ಟೋಬರ್ 7, 2022
28 °C

ಪ್ರಜಾವಾಣಿ ವರದಿ ಪರಿಣಾಮ: ಮಹಿಳೆ ವೃದ್ಧಾಶ್ರಮಕ್ಕೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಜಯನಗರ ಮುಖ್ಯ ರಸ್ತೆಯ ಬಸ್ ನಿಲ್ದಾಣದಲ್ಲಿ ದಿನಬಳಕೆಯ ವಸ್ತುಗಳೊಂದಿಗೆ ತಂಗಿದ್ದ ಮಹಿಳೆಯನ್ನು ತಾಲ್ಲೂಕಿನ ದೊಡ್ಡಕಾನ್ಯದ ‘ಗ್ರೀನ್‌ ಡಾಟ್‌’ ಸಂಸ್ಥೆಯು ನಡೆಸುತ್ತಿರುವ ‘ಮಾನಸ ನೆಲೆ’ ಆರೈಕೆ ಮತ್ತು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.

‘ಪ್ರಜಾವಾಣಿ’ಯಲ್ಲಿ ಜುಲೈ 23ರಂದು ಪ್ರಕಟವಾಗಿದ್ದ ‘ಈ ಮಹಿಳೆಗೆ ಬಸ್ ನಿಲ್ದಾಣವೇ ಆಸರೆ!’ ವರದಿಗೆ ಸ್ಪಂದಿಸಿದ ಮಹಾನಗರಪಾಲಿಕೆ ಸಿಬ್ಬಂದಿಯು ಆರೋಗ್ಯಾಧಿಕಾರಿ ಡಾ.ನಾಗರಾಜ್ ಸೂಚನೆ ಮೇರೆಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಹಾನಗರಪಾಲಿಕೆ ಡೇ–ನಲ್ಮ್‌ ವಿಭಾಗದ ಅಭಿಯಾನ ವ್ಯವಸ್ಥಾಪಕ ಡಾ.ಜೆ.ಎಸ್.ಭೈರಲಿಂಗಯ್ಯ ನೇತೃತ್ವದಲ್ಲಿ ಸಿಬ್ಬಂದಿಯು ಮಹಿಳೆಗೆ ನೆರವಾಗಿದ್ದಾರೆ.

‘ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿ, ಮಹಿಳೆಯನ್ನು ಭೇಟಿಯಾಗಿ ಮಾಹಿತಿ ಪಡೆಯಲಾಯಿತು. ಆಶ್ರಯ ಕಲ್ಪಿಸುವುದಕ್ಕಾಗಿ ಎನ್‌ಜಿಒಗಳಿಗೂ ತಿಳಿಸಲಾಗಿತ್ತು. ‘ಅಭಯ’ ತಂಡ, ಎನ್‌ಜಿಒಗಳವರು ಹಾಗೂ ಅಶೋಕಪುರಂ ಪೊಲೀಸ್‌ ಠಾಣೆ ಸಿಬ್ಬಂದಿ ನೆರವಿನಲ್ಲಿ ಮಹಿಳೆಯನ್ನು ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿಸಲಾಯಿತು. ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ. ಭಾನುವಾರ ಅವರನ್ನು ಆರೈಕೆ ಕೇಂದ್ರಕ್ಕೆ ಕಳುಹಿಸಲಾಯಿತು’ ಎಂದು ಭೈರಲಿಂಗಯ್ಯ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು