ಗುರುವಾರ , ಅಕ್ಟೋಬರ್ 21, 2021
28 °C

ಅನುಮತಿ ಇಲ್ಲದಿದ್ದರೂ ಮೈಸೂರಿನಲ್ಲಿ ನಾಳೆ ನಡೆಯಲಿದೆ ‘ಮಹಿಷ ದಸರಾ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ‘ಮಹಿಷ ದಸರಾ–2021’ ಅ.5ರ ಮಂಗಳವಾರ ಮೈಸೂರಿನಲ್ಲಿ ನಡೆಯಲಿದೆ.

ನಗರದ ವಿಶ್ವಮೈತ್ರಿ ಬುದ್ಧವಿಹಾರದಿಂದ ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್‌ ಉದ್ಯಾನದವರೆಗೂ ಮಹಿಷ ಮೂರ್ತಿಯ ಮೆರವಣಿಗೆ ಬೆಳಿಗ್ಗೆ 9ಕ್ಕೆ ನಡೆಯಲಿದೆ.

ಮಹಿಷ ಮೂರ್ತಿಗೆ ಪುಷ್ಪಾರ್ಚನೆಗೈಯುವ ಮೂಲ ನಿವಾಸಿಗಳು, ನಂತರ ವಿಚಾರ ಸಂಕಿರಣ ನಡೆಸಲಿದ್ದಾರೆ. ಪ್ರಗತಿಪರರು, ವಿಚಾರವಾದಿಗಳು, ವಿವಿಧ ಮಠಾಧೀಶರು ಇದರಲ್ಲಿ ಭಾಗಿಯಾಗಲಿದ್ದಾರೆ.

‘ಮಹಿಷ ದಸರಾ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ, ನಗರ ಪೊಲೀಸರು ಯಾವುದೇ ಅನುಮತಿ ನೀಡಿಲ್ಲ’ ಎಂದು ಮಾಜಿ ಮೇಯರ್‌ ಪುರುಷೋತ್ತಮ್‌ ಸೋಮವಾರ ಇಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು