ಬುಧವಾರ, ಜುಲೈ 28, 2021
21 °C

ಮೈಸೂರು | ಮೊಬೈಲ್‌ ಗೇಮ್‌ ಗೀಳು; ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೊಬೈಲ್‌ ಗೇಮ್‌ ಆಡುವ ಗೀಳು ಹೊಂದಿದ್ದ 14 ವರ್ಷದ ಬಾಲಕನೊಬ್ಬ ಗುರುವಾರ ಸಂಜೆ ಶಟರ್ ಎಳೆಯುವ ಕಬ್ಬಿಣದ ಕೊಕ್ಕೆ ಕುತ್ತಿಗೆಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾನೆ.

9ನೇ ತರಗತಿ ಓದುತ್ತಿದ್ದ ಈ ಬಾಲಕ ಮೊಬೈಲ್‌ ಗೇಮ್‌ವೊಂದನ್ನು ಹೆಚ್ಚು ಆಡುತ್ತಿದ್ದ. ಅದರಲ್ಲಿ ನೀಡಿದ್ದ ‘ಟಾಸ್ಕ್‌’ಅನ್ನು ಪೂರ್ಣಗೊಳಿಸಲು ಕಬ್ಬಿಣದ ಕೊಕ್ಕೆಯನ್ನು ಕುತ್ತಿಗೆಗೆ ಸಿಲುಕಿಸಿಕೊಂಡು ಸಾಹಸ ಮಾಡಲು ಯತ್ನಿಸಿದ್ದಾನೆ.

ಈ ವೇಳೆ ಕೊಕ್ಕೆಯು ಕುತ್ತಿಗೆಗೆ ಬಿಗಿದು ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು