ಶನಿವಾರ, ಜುಲೈ 24, 2021
23 °C

ವೈದ್ಯರ ಸೋಗಿನಲ್ಲಿ ಮೊಬೈಲ್ ಪಡೆದು ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಕೆ.ಆರ್.ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಮಂಗಳವಾರ ವೈದ್ಯರ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಯರಗನಹಳ್ಳಿ ನಿವಾಸಿ ಗೀತಾ ಅವರ ಮೊಬೈಲ್ ಪಡೆದು ಪರಾರಿಯಾಗಿದ್ದಾನೆ.

ಇವರು ತಮ್ಮ ಸಂಬಂಧಿಕರೊಂದಿಗೆ ಅವಿನಾಶ್ ಎಂಬ ವ್ಯಕ್ತಿಯ ಕುರಿತು ಮಾತನಾಡುತ್ತಿದ್ದರು. ವೈದ್ಯನ ಸೋಗಿನಲ್ಲಿ ಅಲ್ಲಿಗೆ ಬಂದ ವ್ಯಕ್ತಿಯು ‘ನಿಮ್ಮ ಸಂಬಂಧಿ ಅವಿನಾಶ್ ಅವರೊಂದಿಗೆ ಮಾತನಾಡಬೇಕು’ ಎಂದು ಹೇಳಿ ಮೊಬೈಲ್ ಮೂಲಕ ಕರೆ ಮಾಡಿಸಿದ್ದಾನೆ. ಅವರೊಂದಿಗೆ ಮಾತನಾಡುತ್ತಿರುವಂತೆ ನಟಿಸುತ್ತಾ ಮೊಬೈಲ್ ಜತೆ ಹೊರಹೋಗಿದ್ದಾನೆ. ಬಳಿಕ ಹುಡುಕಿದಾಗ ಆತ ಪತ್ತೆಯಾಗಲಿಲ್ಲ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ.

ಮದುವೆ ಮಾಡಿಸುತ್ತೇನೆ ಎಂದು ಅತ್ಯಾಚಾರಗೈದ ಧರ್ಮಗುರು

ಹೈರಿಗೆ ಗ್ರಾಮದ ಮಸೀದಿಯ ಧರ್ಮಗುರು ಜಬೀವುಲ್ಲಾ ಎಂಬಾತ ತನ್ನದೇ ಧರ್ಮಕ್ಕೆ ಸೇರಿದ ಯುವತಿಗೆ ಮದುವೆಯಾಗಬೇಕಾದರೆ ಧಾರ್ಮಿಕ ವಿಧಿ ವಿಧಾನ ಅನುಸರಿಸಬೇಕು ಎಂದು ಹೇಳಿ ಅತ್ಯಾಚಾರ ಮಾಡಿದ್ದಾನೆ ಎಂಬ ದೂರು ಪಿರಿಯಾಪಟ್ಟಣ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.