ಬುಧವಾರ, ಆಗಸ್ಟ್ 10, 2022
24 °C

ಜೋಡಿ ಕೊಲೆ ಆರೋಪಿ ಮುನಿಯಪ್ಪ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಜೋಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣದಲ್ಲಿ ಮೊಬೈಲ್‌ ಕರೆ ಆಧರಿಸಿ ಬಂಧಿಸಲಾಗಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಪೂವಯ್ಯ ತಿಳಿಸಿದರು.

ಘಟನೆ ವಿವರ: ಆ.28 ರಂದು ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ಸರ್ವೆ ನಂ 25ರ ದೇವೇಂದ್ರ ಎಂಬುವವರ ಹೊಲದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಅವಷೇಶ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡು ವಿಚಾರಣೆ ಹಂತದಲ್ಲಿ ಸತ್ತ ವ್ಯಕ್ತಿಯೂ ಮಾನವ ಮಾನವ ಅಲಿಯಾಸ್ ರಾಜಪ್ಪ (38) ಎಂದು ತಿಳಿದುಬಂದಿತ್ತು.

ಈ ಘಟನೆಯಲ್ಲಿ ಮುನಿಯಪ್ಪ ಮತ್ತು ರಾಜು ಎಂಬ ಸಹೋದರರು ಮುಖ್ಯ ಆರೋಪಿಯಾಗಿದ್ದು, ಇವರು ದೇವಸ್ಥಾನಗಳಲ್ಲಿ ಹುಂಡಿ ಒಡೆದು ಹಣ ಕಳ್ಳತನ ಮಾಡುವುದು ವೃತ್ತಿಯಾಗಿತ್ತು. ಗೌಡನಕಟ್ಟೆ ಘಟನೆಯಲ್ಲಿ ಮನಸ್ತಾಪ ಎದುರಾದ ಬಳಿಕ ಮಾನವನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದರು.

ಮತ್ತೊಂದು ಕೊಲೆ: ಆರೋಪಿ ಸಹೋದರರಾದ ಮುನಿಯಪ್ಪ ಮತ್ತು ರಾಜು ಇಬ್ಬರು ಕಾಲ್ನಡಿಗೆಯಲ್ಲಿ ವಿವಿಧ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದರು. ಆರೋಪಿ ಸ್ವಂತ ಮೊಬೈಲ್ ಇಲ್ಲದ ಕಾರಣ, ತನ್ನ ಸಂಬಂಧಿಕರಿಗೆ ದಾರಿಹೋಕರ ಫೋನ್ ಮೂಲಕ ಕರೆ ಮಾಡುತ್ತಿದ್ದ. ಈ ಮಧ್ಯೆ ಆರೋಪಿ ಮುನಿಯಪ್ಪ ತನ್ನ ಚಿಕ್ಕಪ್ಪನ ಮಗಳು ಪೂಜಾಳಿಗೆ ದೂರವಾಣಿ ಕರೆ ಮಾಡಿದ ಖಚಿತ ಮಾಹಿತಿ ಆಧರಿಸಿ, ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಪ್ರಭಾಕರ್, ಬೀರೇಗೌಡ, ಗಣೇಶ್, ಮಂಜುನಾಥ್, ಮಜಾಜ್, ಶಿವರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು