ಸೋಮವಾರ, ಸೆಪ್ಟೆಂಬರ್ 20, 2021
23 °C

ಮೈಸೂರಿನಲ್ಲಿ ಸರಣಿ ಸರಗಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿ ಗುರುವಾರ ಬೆಳಿಗ್ಗೆ 6.30 ರಿಂದ 8.30 ರ ವರೆಗೆ ಒಟ್ಟು 5 ಕಡೆ ಸರಣಿ ಸರಗಳ್ಳತನ ನಡೆದಿದೆ‌.

ವಿದ್ಯಾರಣ್ಯಾಪುರಂನಲ್ಲಿ 2, ಎನ್.ಆರ್.ಮೊಹಲ್ಲಾ, ವಿ.ವಿ.ಪುರಂ ಹಾಗೂ ನಜರ್ ಬಾದ್ ನಲ್ಲಿ ತಲಾ ಒಂದೊಂದು ಸರಗಳ್ಳತನಗಳು ನಡೆದಿವೆ.

ಇಟ್ಟಿಗೆಗೂಡಿನ ಕರಗ ದೇವಸ್ಥಾನದ ಬಳಿ ಸುಗುಣಾದೇವಿ (79) ಎಂಬುವವರಿಂದ ಕಳ್ಳರು ಸರ ಕಸಿದಿದ್ದಾರೆ‌. ಇನ್ನುಳಿದ ಕಡೆ ನಡೆದ ಸರಗಳ್ಳತನ ಕುರಿತು ದೂರು ದಾಖಲಾಗಬೇಕಿದೆ‌

ವಿದ್ಯಾರಣ್ಯಾಪುರಂನ ಬ್ರಿಗೇಡ್ ಅಪಾರ್ಟ್ ಮೆಂಟ್ ಹಾಗೂ ಅಕ್ಕಮಹಾದೇವಿ ರಸ್ತೆಯ ಇಂಡಿಯನ್ ಆಯಿಲ್ ಪೆಟ್ರೊಲ್ ಬಂಕ್ ಬಳಿ ಸರಗಳ್ಳತನ ನಡೆದಿದೆ‌. ಇಲ್ಲಿ ಜಯಮ್ಮ (60) ಎಂಬ ಮಹಿಳೆಯಿಂದ ಸರವನ್ನು ಕಸಿಯಲಾಗಿದೆ. ಇವರು ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಅರ್ಧ ಸರ ಸುಮಾರು 22 ಗ್ರಾಂನಷ್ಟು ಸರ ಮಾತ್ರ ಕಳ್ಳರ ಪಾಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು