ಸೋಮವಾರ, ನವೆಂಬರ್ 30, 2020
20 °C

ಮೈಸೂರು ದಸರೆಗೆ ₹2.05 ಕೋಟಿ ಖರ್ಚು: ಸಚಿವ ಎಸ್‌.ಟಿ.ಸೋಮಶೇಖರ್‌ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೋವಿಡ್‌ ಕಾರಣ ಈ ಬಾರಿ ಸರಳವಾಗಿ ಆಚರಿಸಿದ ಮೈಸೂರು ದಸರಾ ಮಹೋತ್ಸವಕ್ಕೆ ಒಟ್ಟು ₹ 2.05 ಕೋಟಿ ಖರ್ಚಾಗಿದೆ.

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ದಸರಾ ಆಚರಣೆಗೆ ಆಗಿರುವ ವೆಚ್ಚದ ವಿವರವನ್ನು ಭಾನುವಾರ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು.

‘ರಾಜ್ಯ ಸರ್ಕಾರವು ಈ ಬಾರಿಯ ದಸರೆಗೆ ₹ 10 ಕೋಟಿ ಬಿಡುಗಡೆ ಮಾಡಿದೆ. ಅದರಲ್ಲಿ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ದಸರಾ ಆಚರಣೆಗೆ ಕ್ರಮವಾಗಿ ₹ 50 ಮತ್ತು ₹ 36 ಲಕ್ಷ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಇನ್ನುಳಿದ ₹ 9.14 ಕೋಟಿಗಳಲ್ಲಿ ಮೈಸೂರು ದಸರಾ ಆಚರಣೆಗೆ ₹ 2,05,83,167 ಮೊತ್ತ ಖರ್ಚಾಗಿದೆ. ಉಳಿಕೆಯಾಗಿರುವ ₹ 7,08,16,833 ಮೊತ್ತ ಜಿಲ್ಲಾಧಿಕಾರಿಯ ಖಾತೆಯಲ್ಲಿ ಇದೆ. ಈ ಹಣವನ್ನು ಮೈಸೂರಿನಲ್ಲಿ ಯಾವ ಉದ್ದೇಶಕ್ಕೆ ಖರ್ಚು ಮಾಡಬೇಕು ಎಂಬುದನ್ನು ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದರು.

ವೇದಿಕೆಗೆ ಬರೋಬ್ಬರಿ ₹ 41 ಲಕ್ಷ ವೆಚ್ಚ: ದಸರಾ ಕಾರ್ಯಕ್ರಮಗಳ ವೇದಿಕೆ ಮತ್ತು ಅಗತ್ಯ ವ್ಯವಸ್ಥೆ ಕಲ್ಪಿಸಲು ₹ 41 ಲಕ್ಷ ಖರ್ಚಾಗಿದೆ. ಈ ಬಾರಿ ಕೇವಲ ಎರಡು ಕಡೆಗಳಲ್ಲಿ ಮಾತ್ರ ವೇದಿಕೆ ನಿರ್ಮಿಸಲಾಗಿತ್ತು. ಉದ್ಭಾಟನಾ ಸಮಾರಂಭಕ್ಕೆ ಚಾಮುಂಡಿ ಬೆಟ್ಟದಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅರಮನೆ ಆವರಣದಲ್ಲಿ ವೇದಿಕೆ ನಿರ್ಮಿಸಲಾಗಿತ್ತು.

‘ಮೈಸೂರು ರಾಜವಂಶಸ್ಥರಿಗೆ ₹ 40 ಲಕ್ಷ ಗೌರವ ಸಂಭಾವನೆ ನೀಡಲಾಗಿದೆ. ಸಾಂಸ್ಕೃತಿಕ ದಸರಾ ನಿರ್ವಹಣೆ ಮತ್ತು ಕಲಾವಿದರ ಸಂಭಾವನೆಗೆ ₹ 44 ಲಕ್ಷ, ದಸರಾ ಆನೆಗಳ ನಿರ್ವಹಣೆಗೆ ₹ 35 ಲಕ್ಷ, ಜಂಬೂ ಸವಾರಿ ಕಾರ್ಯಕ್ರಮ ನಿರ್ವಹಣೆಗೆ ₹ 16 ಲಕ್ಷ ಖರ್ಚಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು