ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಡ್ಡಾಯವಾಗಿ ಮಾಸ್ಕ್‌ ಧರಿಸಿ

Last Updated 12 ಜೂನ್ 2020, 16:06 IST
ಅಕ್ಷರ ಗಾತ್ರ

ಮೈಸೂರು: ‘ಮನೆಯಿಂದ ಬರುವಾಗಲೇ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಮಾಸ್ಕ್ ಲಭ್ಯವಿಲ್ಲದಿದ್ದರೆ ಶುಭ್ರ ಕರವಸ್ತ್ರವನ್ನೇ ಮಾಸ್ಕ್ ರೂಪದಲ್ಲಿ ಬಳಸಿ. ಪರೀಕ್ಷಾ ಕೇಂದ್ರದಲ್ಲಿ ಕುಡಿಯುವ ನೀರಿನ ಸೌಲಭ್ಯ, ಸ್ಯಾನಿಟೈಸರ್ ಇರಲಿವೆ. ಆದರೂ ನಿಮ್ಮ ಸುರಕ್ಷತೆಗಾಗಿ ಮನೆಯಿಂದಲೇ ಕುಡಿಯುವ ನೀರಿನ ಬಾಟಲ್, ಚಿಕ್ಕ ಸ್ಯಾನಿಟೈಸರ್ ತರುವುದು ಆರೋಗ್ಯದ ದೃಷ್ಟಿಯಿಂದ ಕ್ಷೇಮ’ ಎಂದು ಕಿವಿಮಾತು ಹೇಳಿದರು.

‘ಪರೀಕ್ಷೆಗಾಗಿ ಮಕ್ಕಳನ್ನು ಕರೆದುಕೊಂಡು ಬರುವ ಪೋಷಕರು ಮುನ್ನೆಚ್ಚರಿಕೆ ವಹಿಸಬೇಕು. ಪರೀಕ್ಷಾ ಕೇಂದ್ರದ ಬಳಿ ವಿದ್ಯಾರ್ಥಿಯನ್ನು ಬಿಟ್ಟ ನಂತರ ಕೇಂದ್ರದ ಹೊರಗೆ ಗುಂಪುಗೂಡಿ ನಿಲ್ಲುವ ಬದಲು ತಮ್ಮ ಮನೆಗಳಿಗೆ ಹೋಗಬೇಕು. ಪರೀಕ್ಷೆ ಮುಗಿಯುವ ವೇಳೆಗೆ ಮತ್ತೊಮ್ಮೆ ಬಂದು ನಿಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯಿರಿ’ ಎಂದು ಸಲಹೆ ನೀಡಿದರು.

ಇಂಗ್ಲಿಷ್ ಪರೀಕ್ಷೆಗೆ 31,569 ವಿದ್ಯಾರ್ಥಿಗಳು

ದ್ವಿತೀಯ ಪಿಯು ಇಂಗ್ಲಿಷ್ ಭಾಷಾ ವಿಷಯದ ಪರೀಕ್ಷೆ ಜೂನ್ 18ರ ಗುರುವಾರ ನಡೆಯಲಿದ್ದು, ಜಿಲ್ಲೆಯ 50 ಪರೀಕ್ಷಾ ಕೇಂದ್ರಗಳಲ್ಲಿ 31,569 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ 504 ವಿದ್ಯಾರ್ಥಿಗಳು ತಮ್ಮೂರುಗಳಿಗೆ ತೆರಳಿದ್ದು, ಇವರು ತಮ್ಮ ಸಮೀಪದ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.

ಬೇರೆ ಜಿಲ್ಲೆಗಳಿಂದ ಮೈಸೂರಿಗೆ 436 ವಿದ್ಯಾರ್ಥಿಗಳು ಬಂದಿದ್ದು, ಇವರಿಗೂ ಸಹ ತಮ್ಮ ಸಮೀಪದ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಓದುತ್ತಿದ್ದ ಹೊರ ರಾಜ್ಯದ 9 ವಿದ್ಯಾರ್ಥಿಗಳಿದ್ದು, ಅವರಿಗೆ ಇ–ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಈ ವಿದ್ಯಾರ್ಥಿಗಳ ಪೋಷಕರು ಸೇವಾ ಸಿಂಧು ಆ್ಯಪ್‌ನಲ್ಲಿ ವಿದ್ಯಾರ್ಥಿಯ ಪ್ರವೇಶಪತ್ರ, ಪರೀಕ್ಷಾ ಕೇಂದ್ರದ ಪಟ್ಟಿಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಇ–ಪಾಸ್‌ ಪಡೆಯಬಹುದು ಎಂದರು.

ಹೆಚ್ಚುವರಿ ಕೊಠಡಿ–ಸಿಬ್ಬಂದಿ

‘ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಎರಡು ಹೆಚ್ಚುವರಿ ಕೊಠಡಿ ಮೀಸಲಿಡಲಾಗಿದೆ. ಜ್ವರ, ಕೆಮ್ಮು, ಶೀತದ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಇಲ್ಲಿ ಅವಕಾಶ ಕೊಡಲಾಗುವುದು’ ಎಂದರು.

‘ಕೋವಿಡ್‌–19ನ ಲಕ್ಷಣಗಳು ಕಂಡು ಬಂದು ಈ ಬಾರಿ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಜುಲೈನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವಕಾಶ ಮಾಡಿಕೊಡುತ್ತೇವೆ. ಆಗಲೂ ಈ ವಿದ್ಯಾರ್ಥಿಗಳನ್ನು ಮೊದಲ ಬಾರಿ ಪರೀಕ್ಷೆ ಬರೆಯುವವರು ಎಂದೇ ಪರಿಗಣಿಸಲಾಗುವುದು’ ಎಂದು ಹೇಳಿದರು.

‘ಮೂರೂವರೆ ಅಡಿ ಅಂತರಕ್ಕೊಂದು ಡೆಸ್ಕ್ ಹಾಕಲಾಗುವುದು. ವಿದ್ಯಾರ್ಥಿಗಳನ್ನು ಜಿಗ್‌ಜಾಗ್‌ ಮಾದರಿಯಲ್ಲಿ ಕೂರಿಸಿ ಪರೀಕ್ಷೆ ಬರೆಯಿಸಲಿದ್ದೇವೆ. ಸಹಜವಾಗಿ ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಅವಕಾಶವಿರಲಿದೆ. ಕನಿಷ್ಠ ಅಂತರ ಕಾಪಾಡಿಕೊಳ್ಳಬೇಕಿರುವುದರಿಂದ ಈಗಾಗಲೇ ಎಲ್ಲ ಪರೀಕ್ಷಾ ಕೇಂದ್ರಗಳಿಂದ 298 ಹೆಚ್ಚುವರಿ ಕೊಠಡಿ ಬಳಸಲಾಗುತ್ತಿದೆ. ಈ ಹೆಚ್ಚುವರಿ ಕೊಠಡಿಗಳ ಹೊಸ ಬ್ಲಾಕ್‌ಗೂ, ಪರೀಕ್ಷಾ ಕೇಂದ್ರಕ್ಕೂ ನಡುವಿನ ಅಂತರ 1 ಕಿ.ಮೀ.ನೊಳಗಿರುವಂತೆ ನೋಡಿಕೊಳ್ಳಲಾಗಿದೆ’ ಎಂದರು.

‘ಹೆಚ್ಚುವರಿ ಕೊಠಡಿ ಮಾಡಿರುವುದರಿಂದ ಸಹಾಯಕ ಸಿಬ್ಬಂದಿಯ ಸಂಖ್ಯೆಯೂ ಹೆಚ್ಚಿರಲಿದೆ. ಇದಕ್ಕಾಗಿ ಪ್ರೌಢಶಾಲಾ ಶಿಕ್ಷಕರು, ಪದವಿ ಕಾಲೇಜುಗಳ ಪ್ರಾಧ್ಯಾಪಕರನ್ನು ಬಳಸಿಕೊಳ್ಳುತ್ತೇವೆ’ ಎಂದು ತಿಳಿಸಿದರು.

‘ಕ್ವಾರಂಟೈನ್‌ ಕೇಂದ್ರಗಳಾಗಿಲ್ಲ’

‘ಜಿಲ್ಲೆಯಲ್ಲಿನ ಯಾವೊಂದು ಪರೀಕ್ಷಾ ಕೇಂದ್ರವೂ ಕ್ವಾರಂಟೈನ್ ಕೇಂದ್ರವಾಗಿಲ್ಲ. ಪ್ರತಿ ಕೇಂದ್ರದಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಿದ್ದೇವೆ. ಪರೀಕ್ಷೆ ಆರಂಭಕ್ಕೂ ಮುನ್ನ ಸ್ಯಾನಿಟೈಸೇಶನ್‌ ಮಾಡಲಾಗುವುದು. ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿರುವುದರಿಂದ ಶೌಚಾಲಯ ಬಳಕೆ ಹೆಚ್ಚಿರಲಿದೆ. ಆದ್ದರಿಂದ ಎರಡು ಬಾರಿ ಶೌಚಾಲಯ ಸ್ವಚ್ಛಗೊಳಿಸುವಂತೆ ಇಲಾಖೆಯಿಂದ ಸ್ಪಷ್ಟ ನಿರ್ದೇಶನವೂ ಬಂದಿದೆ’ ಎಂದು ಗೀತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT