ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಕೆ ಗತಿಯಲ್ಲಿ ಸೌತೆ, ಕೋಳಿಮೊಟ್ಟೆ; ನಿಯಂತ್ರಣಕ್ಕೆ ಬರುತ್ತಿರುವ ಈರುಳ್ಳಿ ಬೆಲೆ

Last Updated 21 ಜನವರಿ 2020, 13:49 IST
ಅಕ್ಷರ ಗಾತ್ರ

ಮೈಸೂರು: ಈ ವಾರ ಮಾರುಕಟ್ಟೆಯಲ್ಲಿ ಸೌತೆಕಾಯಿ ಧಾರಣೆಯ ಇಳಿಕೆ ಗತಿ ಮುಂದುವರಿದಿದೆ. ಇದರ ಕನಿಷ್ಠ ಬೆಲೆ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 3 ದಾಖಲಾಗಿದ್ದರೆ, ಗರಿಷ್ಠ ಧಾರಣೆ ₹ 4 ಇದೆ.

ವಿಚಿತ್ರ ಎಂದರೆ ಕಳೆದ ವರ್ಷ ಇದೇ ಸಮಯದಲ್ಲಿ ಇದರ ಆವಕ ಮಾರುಕಟ್ಟೆಗೆ ದಿನವೊಂದಕ್ಕೆ 170 ಕ್ವಿಂಟಲ್‌ನಷ್ಟು ಇತ್ತು. ಆಗ ಇದರ ಧಾರಣೆ ಕೆ.ಜಿಗೆ ₹ 10ರಿಂದ 14 ಇತ್ತು. ಆದರೆ, ಈಗ 50ರಿಂದ 60 ಕ್ವಿಂಟಲ್‌ನಷ್ಟು ಮಾತ್ರ ಸೌತೆಕಾಯಿ ಮಾರುಕಟ್ಟೆಗೆ ಬರುತ್ತಿದೆ. ಆವಕ ಕಡಿಮೆಯಾದರೂ ಬೆಲೆಯಲ್ಲಿ ಏರಿಕೆ ಕಾಣದಿರುವುದು ರೈತರಲ್ಲಿ ನಿರಾಸೆ ಮೂಡಿಸಿದೆ.

ಕೇರಳ ವರ್ತಕರಿಂದ ಬೇಡಿಕೆ ವ್ಯಕ್ತವಾಗದೇ ಇರುವುದರಿಂದ ಬೆಲೆಯಲ್ಲಿ ಚೇತರಿಕೆ ಕಾಣಲು ಸಾಧ್ಯವಾಗಿಲ್ಲ ಎಂದು ಎಪಿಎಂಸಿ ವ್ಯಾಪಾರಿ ರಾಮಕೃಷ್ಣ ಹೇಳುತ್ತಾರೆ.

ಸೌತೆಕಾಯಿಯನ್ನು ಗಿಡದಿಂದ ಕೀಳುವ ಕೂಲಿಯೂ ದಕ್ಕದ ಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ನಷ್ಟ ತರಿಸಿದೆ.

ಟೊಮೆಟೊ ಸಗಟುದರ ಕೆ.ಜಿಗೆ ₹ 12ರಿಂದ 14 ಇದ್ದದ್ದು, ಇದೀಗ ₹ 9ಕ್ಕೆ ಕಡಿಮೆಯಾಗಿದೆ. ಬೀನ್ಸ್ ದರ ಸಹ ₹ 40ರಿಂದ ₹ 35ಕ್ಕೆ ಇಳಿಕೆ ಕಂಡಿದೆ. ಈ ದರ ವ್ಯತ್ಯಾಸಗಳು ಚಿಲ್ಲರೆ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರದೆ ಹೆಚ್ಚಿನ ದರದಲ್ಲೇ ಇವು ಮಾರಾಟವಾಗುತ್ತಿವೆ.

ಸೊಪ್ಪಿನ ದರ ಇಳಿಕೆ

ಕೊಳವೆಬಾವಿ ನೀರಿನಿಂದ ಬೆಳೆಯಲಾಗುತ್ತಿರುವ ವಿವಿಧ ಜಾತಿಯ ಸೊಪ್ಪಿನ ಉತ್ಪಾದನೆ ಹೆಚ್ಚಾಗಿದೆ. ಮಳೆ ಇಲ್ಲದೇ ಇರುವುದರಿಂದ ಸೊಪ್ಪು ನಾಶವಾಗುತ್ತಿಲ್ಲ. ಬೀಳುತ್ತಿರುವ ಇಬ್ಬನಿಯಿಂದಾಗಿ ಸಮೃದ್ಧ ಇಳುವರಿಯಾಗಿದ್ದು, ಪೂರೈಕೆಯಲ್ಲಿ ಹೆಚ್ಚಳವಾಗಿ ಬೆಲೆಯಲ್ಲಿ ಕುಸಿತ ಉಂಟಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲೇ ಬಹುತೇಕ ಜಾತಿಯ ಸೊಪ್ಪುಗಳು ₹ 10ಕ್ಕೆ 4 ಕಟ್ಟುಗಳು ಸಿಗುತ್ತಿವೆ. ತಳ್ಳುವ ಗಾಡಿಗಳಲ್ಲಿ ₹ 10ಕ್ಕೆ 5 ಕಟ್ಟುಗಳು ಸಿಗುತ್ತಿವೆ. ಸೊಪ್ಪು ಬೆಳೆದವರಿಗೂ ಸಮರ್ಪಕವಾದ ಲಾಭ ಸಿಗುತ್ತಿಲ್ಲ.

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)
ಟೊಮೆಟೊ 12 09
ಬೀನ್ಸ್ 40 35
ಕ್ಯಾರೆಟ್ 46 55
ಎಲೆಕೋಸು 10 10
ದಪ್ಪಮೆಣಸಿನಕಾಯಿ 22 20
ಬದನೆ 25 28
ನುಗ್ಗೆಕಾಯಿ 160 180
ಹಸಿಮೆಣಸಿನಕಾಯಿ 22 20
ಈರುಳ್ಳಿ 40 40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT