ಶನಿವಾರ, ಏಪ್ರಿಲ್ 4, 2020
19 °C
ಇಂಥದ್ದನ್ನು ಸಹಿಸಬೇಕಾ?: ಪ್ರತಾಪ ಸಿಂಹ

ಮೈಸೂರು | ಚಾಮುಂಡೇಶ್ವರಿ ರಥ ಚಕ್ರದ ವಿವಾದ: ಒಂದೇ ದಿನದಲ್ಲಿ ವಿನ್ಯಾಸ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಚಾಮುಂಡಿಬೆಟ್ಟದಲ್ಲಿನ ಮಹಾಬಲೇಶ್ವರ ರಥದ ಚಕ್ರದ ಮೇಲಿನ ಚಿತ್ರಕಲಾ ವಿನ್ಯಾಸಕ್ಕೆ ಆಕ್ಷೇಪ ವ್ಯಕ್ತವಾದ 24 ಗಂಟೆಯಲ್ಲಿ, ಆ ವಿನ್ಯಾಸವನ್ನು ಬದಲಾಯಿಸಲಾಗಿದೆ.

ರಥಕ್ಕೆ ಹೊಸದಾಗಿ ಚಕ್ರ ನಿರ್ಮಿಸಿ ಪೇಂಟಿಂಗ್‌ ಮಾಡುವ ಗುತ್ತಿಗೆಯನ್ನು ನೀಡಲಾಗಿತ್ತು. ಗುತ್ತಿಗೆದಾರರು ಸೋಮವಾರ ಚಕ್ರದ ಮೇಲೆ ಚಂದ್ರ ಹಾಗೂ ನಕ್ಷತ್ರ ಆಕಾರದ ಚಿತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಇದಕ್ಕೆ ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ಮುಜರಾಯಿ ಇಲಾಖೆಯು ಮಂಗಳವಾರ ವಿನ್ಯಾಸ ಬದಲಾಯಿಸಿದೆ.

ಚಕ್ರದ ಮೊದಲ ವಿನ್ಯಾಸಕ್ಕೆ ಫೇಸ್‌ಬುಕ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಪ್ರತಾಪಸಿಂಹ, ‘ನೋಡಿ... ಇಂಥದ್ದನ್ನು ಸಹಿಸಬೇಕಾ? ನಿಮ್ಮ ಗಮನಕ್ಕೆ ಇರಲಿ ಎಂದು ಫೋಟೊ ಹಾಕಿದ್ದೇನೆ. ಪಾಠ ಕಲಿಸದೇ ಬಿಡುವುದಿಲ್ಲ’ ಎಂದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)