ಭಾನುವಾರ, ಏಪ್ರಿಲ್ 11, 2021
33 °C

ತಂಬಾಕು ನಿಷೇಧ ಪ್ರಸ್ತಾವ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು (ಮೈಸೂರು): ತಂಬಾಕು ಬೆಳೆಯನ್ನು 2020ಕ್ಕೆ ನಿಷೇಧಿಸುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಸಂಸದ ಪ್ರತಾಪಸಿಂಹ ಸೋಮವಾರ ಹೇಳಿದರು.

ತಾಲ್ಲೂಕಿನ ಹೆಗ್ಗಂದೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದು ತಂಬಾಕು ಬೆಳೆಗಾರರ ಪರವಾಗಿ ಸರ್ಕಾರ ನಿಂತಿದೆ ಎಂದು ತಿಳಿಸಿದರು.

ಯುಪಿಎ ಸರ್ಕಾರ ಮಾಡಿಕೊಂಡಿದ್ದ ಒಡಂಬಡಿಕೆಯಿಂದ ದಕ್ಷಿಣ ಭಾರತದಲ್ಲಿ ತಂಬಾಕು ಬೆಳೆಯುವ ಸಾವಿರಾರು ರೈತರು ತೊಂದರೆ ಎದುರಿಸುವ ಭೀತಿಯಲ್ಲಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ತಂಬಾಕು ನಿಷೇಧಿಸುವ ಪ್ರಸ್ತಾವ ಮುಂದಿಟ್ಟಿತ್ತು. 2020ಕ್ಕೆ ತಂಬಾಕು ಬೆಳೆ ಬೆಳೆಯುವುದನ್ನು ಅಂತ್ಯಗೊಳಿಸಲು ಸೂಚನೆ ನೀಡಿತ್ತು. ಆದರೆ, ಇದನ್ನು ಧಿಕ್ಕರಿಸಿದ್ದ ಬ್ರೆಜಿಲ್‌, ದಕ್ಷಿಣ ಆಫ್ರಿಕಾ, ಚೀನಾದಂತಹ ರಾಷ್ಟ್ರಗಳು ತಂಬಾಕು ಉತ್ಪಾದನೆಯನ್ನು ಮುಂದುವರೆಸಿವೆ. ಆದರೆ, ಭಾರತಕ್ಕೆ ಏಕೆ ನಿಯಂತ್ರಣ ಹೇರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದಿದ್ದಾರೆ ಎಂದು ವಿವರಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು