ಸೋಮವಾರ, ಆಗಸ್ಟ್ 15, 2022
23 °C

ಮೈಸೂರು: ‘ಪೂಚಂತೇ ನೆನಪಿನಲಿ’ ಮಾಲಿಕೆ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜನ್ಮದಿನದ ಅಂಗವಾಗಿ ಸೆ.8ರಿಂದ 14ರವರೆಗೆ ಮೈಸೂರು ಆಕಾಶವಾಣಿಯಲ್ಲಿ ‘ಪೂಚಂತೇ ನೆನಪಿನಲಿ’ ಮಾಲಿಕೆಯ ಮೂಲಕ, ತೇಜಸ್ವಿ ಅವರ ರೂಪಕ, ಕಥೆಗಳನ್ನು ಆಧರಿಸಿದ ನಾಟಕಗಳನ್ನು ಬಿತ್ತರಿಸುವ ಮೂಲಕ ಅವರನ್ನು ಸ್ಮರಿಸಲಾಗುವುದು.

ಮೈಸೂರು ಆಕಾಶವಾಣಿ ಎಫ್‌ಎಂ 100.6ರಲ್ಲಿ ನಿತ್ಯ ಬೆಳಿಗ್ಗೆ 11.15ಕ್ಕೆ ಈ ಮಾಲಿಕೆ ಪ್ರಸಾರವಾಗಲಿದ್ದು, ಸೆ.8ರಂದು ರೂಪಕ ತೇಜಸ್ವಿ ಕಥಾ ಕೌಶಲ, 9ರಂದು ನಾಟಕ ಸಂಬಳಕ್ಕೆ ಸಿಕ್ಕಿಕೊಂಡ ದೆವ್ವ, 10ರಂದು ಕಾಳಪ್ಪನ ಕೋಬ್ರಾ, 11ರಂದು ಕಿರುಗೂರಿನ ಗಯ್ಯಾಳಿಗಳು, 12ರಂದು ಗಾಡ್ಲಿ ಹಾಗೂ ಮಧ್ಯಾಹ್ನ 4ಕ್ಕೆ ಜುಗಾರಿ ಕ್ರಾಸ್, 13ರಂದು ಮಾಯಾಮೃಗ, 14 ರಂದು ಅವಾಂತರದ ಶೀನಪ್ಪ ಪ್ರಸಾರವಾಗಲಿದೆ ಎಂದು ಸಹಾಯಕ ನಿರ್ದೇಶಕರಾದ ಎಸ್.ಎಸ್.ಉಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬೆಳ್ಳಿ ಬೆರಗು-ಮೈಸೂರು ಕೊಡುಗೆ’

ಮೈಸೂರು: ಸಿನೆಮಾ ರಂಗಕ್ಕೆ ದುಡಿದ ಮೈಸೂರಿನ ಪ್ರತಿಭೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ‘ಬೆಳ್ಳಿ ಬೆರಗು-ಮೈಸೂರು ಕೊಡುಗೆ’ ಎಂಬ ಸರಣಿ ಕಾರ್ಯಕ್ರಮವನ್ನು ಆಕಾಶವಾಣಿಯಲ್ಲಿ ಪ್ರತಿ ಮಂಗಳವಾರ, ಗುರುವಾರ ಪ್ರಸಾರ ಮಾಡಲಾಗುವುದು.

ಈ ಸರಣಿ ಕಾರ್ಯಕ್ರಮ ಪ್ರತಿ ಮಂಗಳವಾರ, ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದ್ದು, ಬುಧವಾರ ಮತ್ತು ಶುಕ್ರವಾರ ಸಂಜೆ 5 ಗಂಟೆಗೆ ಮರು ಪ್ರಸಾರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು