ಭಾನುವಾರ, ಸೆಪ್ಟೆಂಬರ್ 19, 2021
28 °C
ರಾಜಕಾರಣಿಗಳೆಲ್ಲ ಪುಡಾರಿಗಳು: ರಾಮಚಂದ್ರೇಗೌಡ

ಸಿದ್ದರಾಮಯ್ಯ ಬಸವಣ್ಣನಿಗೆ ಸಮಾನ: ರಾಮಚಂದ್ರೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ರಾಜಕಾರಣದಲ್ಲಿ ನಿಜವಾದ ನಾಯಕ ಸಿದ್ದರಾಮಯ್ಯ ಮಾತ್ರ. ಉಳಿದವರು ಯಾರೂ ನಿಜವಾದ ರಾಜಕಾರಣಿಗಳಲ್ಲ. ಅವರೆಲ್ಲ ಪುಡಾರಿಗಳು’ ಎಂದು ಚಿಂತಕ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಟೀಕಿಸಿದರು.

ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯು ಗುರುವಾರ ಇಲ್ಲಿ ಏರ್ಪಡಿಸಿದ್ದ ‘ಭಾಗ್ಯವಿಧಾತ ಸಿದ್ದರಾಮಯ್ಯ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘ಕರ್ನಾಟಕದಲ್ಲಿ ಬಂದ ಬಹುತೇಕ ರಾಜಕಾರಣಿಗಳು ಹಂಚಿಕೆದಾರರ ಕೆಲಸ ಮಾಡಿದರೇ ಹೊರತು, ಮಾದರಿ ರಾಜಕಾರಣಿಗಳಾಗಲಿಲ್ಲ. ಹೆಂಡ ಕೊಡಿ ಎಂದು ಕೇಳಿದವರಿಗೆಲ್ಲ ಹೆಂಡ ಕುಡಿಸುವವರು ನಿಜವಾದ ನಾಯಕರೇ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಅವರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದು, ಕಾರ್ಯವೈಖರಿಯಲ್ಲಿ ಬಸವಣ್ಣನಿಗೆ ಸಮಾನರಾಗಿ ನಿಲ್ಲಬಲ್ಲರು. ಜನರಿಗಾಗಿ ಏನು ಮಾಡಬೇಕು ಎಂದು ಯೋಚಿಸುವ ಶಕ್ತಿ ಅವರಲ್ಲಿದೆ. ಆದ್ದರಿಂದಲೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಅನ್ನ ಭಾಗ್ಯ ಯೋಜನೆಯನ್ನು ಘೋಷಿಸಿದ್ದರು’ ಎಂದರು.

‘ಕಾರ್ಮಿಕರು, ಭೂಮಿ ಇಲ್ಲದವರು, ದಿನಕ್ಕೆ ₹ 100 ಸಂಪಾದಿಸಲೂ ಕಷ್ಟಪಡುವ ಬಡವರು ಮಾತ್ರ ಅವರ ಮನಸ್ಸಿನಲ್ಲಿದ್ದರು. ಅವರ ಹಸಿವು ಮತ್ತು ಮನಸ್ಸು ತಣಿಸುವ ಕೆಲಸ ಮಾಡಿದರು. ಈ ಸಮಾಜಕ್ಕೆ ಅನ್ನ ಮತ್ತು ಮನಸ್ಸನ್ನು ಕೊಟ್ಟ ಏಕೈಕ ನಾಯಕ ಸಿದ್ದರಾಮಯ್ಯ’ ಎಂದು ಬಣ್ಣಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು