ಭಾನುವಾರ, ಆಗಸ್ಟ್ 1, 2021
27 °C

ಸಹಾಯಧನ: ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: 2020-21ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಲ್ಲಿ ಸಹಾಯಧನ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶ ವಿಸ್ತರಣೆ ಕಾಂಪೊನೇಟ್ ಅಂಗಾಂಶ ಕೃಷಿ ಬಾಳೆಗೆ ₹ 12,200 (ಪ್ರತಿ ಎಕರೆಗೆ), ಕಂದು ಬಾಳೆ ಬೆಳೆಗೆ ₹ 7,800 (ಪ್ರತಿ ಪ್ಯಾಕ್), ಹೌಸ್ ಘಟಕಕ್ಕೆ ₹ 2 ಲಕ್ಷ ಶೇ 50ರ ಸಹಾಯಧನ, ಪಾಲಿಹೌಸ್ ಘಟಕಕ್ಕೆ ಶೇ 50ರ ಸಹಾಯಧನ, ಯಾಂತ್ರೀಕರಣ ಘಟಕದಡಿ ಮಿನಿ ಟ್ರಾಕ್ಟರ್-20 ಎಚ್‍ಪಿ ಸಾಮಾನ್ಯ ರೈತರಿಗೆ ₹ 75,000, ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ₹ 1 ಲಕ್ಷ ಸಹಾಯಧನ ನೀಡಲಾಗುವುದು.

ಸಮಗ್ರ ಪೋಷಕಾಂಶ/ಸಮಗ್ರ ಪೀಡೆ ನಿರ್ವಹಣೆಯಡಿ ಹೆಕ್ಟೇರ್‌ಗೆ ₹ 1,200, ಪ್ಲಾಸ್ಟಿಕ್ ಮಲ್ಟಿಂಗ್‍ಗೆ ₹ 6,400 (ಪ್ರತಿ ಎಕರೆಗೆ) ಸಹಾಯಧನ ನೀಡಲಾಗುವುದು.

ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತೆಂಗು, ಅಂಗಾಂಶ ಕೃಷಿ ಬಾಳೆ, ಮಾವು, ನಿಂಬೆ, ನುಗ್ಗೆ, ಸೀಬೆ, ಸಪೋಟ, ಪಪ್ಪಾಯ ಪ್ರದೇಶ ವಿಸ್ತರಣೆ ಮಾಡುವ ಸಣ್ಣ-ಅತಿಸಣ್ಣ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಕೂಲಿ ವೆಚ್ಚ ಹಾಗೂ ಸಾಮಗ್ರಿ ವೆಚ್ಚವನ್ನು ಬೆಳೆವಾರು ದರಪಟ್ಟಿಯ ಪ್ರಕಾರ ಸಹಾಯಧನ ನೀಡಲಾಗುವುದು.

ತೆಂಗು ಮತ್ತು ಮಾವು ಬೆಳೆಯ ಪುನಶ್ಚೇತನದಡಿ ಇಚ್ಚೆಯುಳ್ಳ ರೈತರು ಎಂನರೇಗಾ ಮಾರ್ಗಸೂಚಿಯನ್ವಯ ಅಗತ್ಯ ದಾಖಲಾತಿಗಳೊಂದಿಗೆ ಜುಲೈ 15ರೊಳಗೆ ಅರ್ಜಿ ಸಲ್ಲಿಸುವುದು.

ಮಾಹಿತಿಗೆ 0821-2430450 ಸಂಪರ್ಕಿಸಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.