ಮಂಗಳವಾರ, ಸೆಪ್ಟೆಂಬರ್ 17, 2019
24 °C

ಸೆಲ್ಫಿ ಮಾಡಿಟ್ಟು ಆತ್ಮಹತ್ಯೆ

Published:
Updated:

ಮೈಸೂರು: ಅಪಘಾತ ಮಾಡಿ ವ್ಯಕ್ತಿಯೊಬ್ಬರನ್ನು ಗಾಯಗೊಳಿಸಿದ ಆಟೊ ಚಾಲಕ ಶಿವಕುಮಾರ್ (25) ಪೊಲೀಸರಿಗೆ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಸಾಲ ಮಾಡಿ ಆಟೊ ಖರೀದಿಸಿದ್ದರು. ಕಳೆದ ವಾರ ವ್ಯಕ್ತಿಯೊಬ್ಬರಿಗೆ ಗುದ್ದಿ ಪರಾರಿಯಾಗಿದ್ದರು. ಪೊಲೀಸರು ಆಟೊವನ್ನು ವಶಪಡಿಸಿಕೊಂಡರು. ಇದರಿಂದ ಹೆದರಿದ ಶಿವಕುಮಾರ್ ಸೆಲ್ಫಿ ವಿಡಿಯೊ ಮಾಡಿ ಗಾಯಾಳುವಿನ ಕ್ಷಮೆ ಕೋರಿ, ಕುಟುಂಬದ ಸದಸ್ಯರಿಗೆ ತೊಂದರೆ ನೀಡಬಾರದು ಎಂದು ಮನವಿ ಮಾಡಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)