ಸೋಮವಾರ, ಡಿಸೆಂಬರ್ 9, 2019
17 °C
ಲಷ್ಕರ್ ಪೊಲೀಸರು ಹಾಗೂ ಸಾರ್ವಜನಿಕರ ಕಾರ್ಯಾಚರಣೆ

ಮೊಬೈಲ್‌ ಚೋರನನ್ನು ಬೆನ್ನಟ್ಟಿ ಹಿಡಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ದೊಡ್ಡಒಕ್ಕಲಗೇರಿಯಲ್ಲಿ ಮನೆ ಮುಂದೆ ಮಾತನಾಡುತ್ತಾ ನಿಂತಿದ್ದ ಮಹಿಳೆಯೊಬ್ಬರಿಂದ ಮೊಬೈಲ್‌ನ್ನು ಕಸಿದು ಪರಾರಿಯಾಗುತ್ತಿದ್ದ ಸುಹೇಲ್‌ ಪಾಷಾ (20) ಎಂಬಾತನನ್ನು ಸಾರ್ವಜನಿಕರು ಹಾಗೂ ಲಷ್ಕರ್ ಠಾಣೆ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.

ಮಂಜುಳಾ (40) ಎಂಬುವವರು ತಮ್ಮ ಮನೆಯ ಮುಂದೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಹಿಂದಿನಿಂದ ಬಂದ ಸುಹೇಲ್ ಪಾಷಾ ಮೊಬೈಲ್ ಕಿತ್ತುಕೊಂಡು ಓಡಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಬೆನ್ನಟ್ಟಿದ್ದಾರೆ. ಈ ದೃಶ್ಯವನ್ನು ಕಂಡ ಹೆಡ್‌ಕಾನ್‌ಸ್ಟೆಬಲ್‌ ಪಾಪೇಗೌಡ ಸಾರ್ವಜನಿಕರೊಂದಿಗೆ ಬೆನ್ನಟ್ಟಿ ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌

ವೈಟ್ನರ್ ಹಾಗೂ ಸೆಲ್ಯೂಷನ್ ಸೇವಿಸುವ ಚಟ ಉಳ್ಳವನಾಗಿದ್ದ ಈತ ಇದಕ್ಕಾಗಿಯೇ ಕಳ್ಳತನ ನಡೆಸಲು ಯತ್ನಿಸಿದ್ದ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)