ದರೋಡೆ, ಕೊಲೆ ಯತ್ನ; ಮೂವರು ಆರೋಪಿಗಳಿಗೆ ಜೈಲು

7

ದರೋಡೆ, ಕೊಲೆ ಯತ್ನ; ಮೂವರು ಆರೋಪಿಗಳಿಗೆ ಜೈಲು

Published:
Updated:

ಮೈಸೂರು: ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು ಅಲ್ಲದೇ ದರೋಡೆ ಮಾಡಿದ ಇಬ್ಬರಿಗೆ 7 ವರ್ಷ ಕಠಿಣ ಸಜೆ ಹಾಗೂ ಒಬ್ಬರಿಗೆ 2 ವರ್ಷ ಸಾದಾ ಸಜೆಯನ್ನು 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ವಿಧಿಸಿದೆ.

ಆರೋಪಿಗಳಾದ ಕೆ.ಬಿ.ಬೋರೇಗೌಡ 2 ವರ್ಷ ಸಾದಾ ಸಜೆ ಪಡೆದಿದ್ದರೆ, ಮಹದೇವು ಮತ್ತು ಎಂ.ಟಿ.ಮಹೇಶ್ 7 ವರ್ಷ ಕಠಿಣ ಶಿಕ್ಷೆ ಪಡೆದವರು. ಇವರು ಹೂಟಗಳ್ಳಿಯ ಕೆಎಚ್‌ಬಿ ಕಾಲೊನಿ ನಿವಾಸಿ ವನಜಾಕ್ಷಿ ಎಂಬುವವರ ಮೇಲೆ 2013ರ ಅಕ್ಟೋಬರ್ 25ರಂದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ₹ 50 ಸಾವಿರ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದರು.

ಪ್ರಕರಣದ ವಿವರ: ವನಜಾಕ್ಷಿ ಅವರು ಹೊಸ ಮನೆ ಕಟ್ಟುವಾಗ ಆರೋಪಿಗಳು ಅಲ್ಲಿ ಕೆಲಸ ಮಾಡುತ್ತಿದ್ದರು. ಇವರು ಎಂ.ಟಿ.ಮಹೇಶ ಹಾಗೂ ಎಲ್.ಕೆ.ರವಿ ಅವರೊಂದಿಗೆ ಸಂಚು ರೂಪಿಸಿ, ಕೇಬಲ್ ರಿಪೇರಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿ ಚಾಕುವಿನಿಂದ ವನಜಾಕ್ಷಿ ಅವರ ಕುತ್ತಿಗೆ ಕೊಯ್ದು ಗಾಯಗೊಳಿಸಿ, ದರೋಡೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೃಷ್ಣಯ್ಯ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತಲಾ ₹ 5 ಸಾವಿರ ದಂಡ ವಿಧಿಸಿದರು.

ಸರ್ಕಾರ ಪರವಾಗಿ ಸರ್ಕಾರಿ ಅಭಿಯೋಜಕ (ಪ್ರಭಾರ) ಪಿ.ಬಿ.ಧರೆಣ್ಣನವರ್ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !