ಶನಿವಾರ, ಸೆಪ್ಟೆಂಬರ್ 25, 2021
22 °C

ಹುಣಸೂರು: ಗಂಡು ಹುಲಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ ವಲಯದಲ್ಲಿ 11 ವರ್ಷದ ಗಂಡು ಹುಲಿಯೊಂದು ಮೃತಪಟ್ಟಿದೆ ಎಂದು ಹುಲಿ ಯೋಜನಾ ನಿರ್ದೇಶಕರ ಕಚೇರಿ ತಿಳಿಸಿದೆ.

ಎಂದಿನಂತೆ ಗುರುವಾರವೂ ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದಾಗ, ಮಂಟಳ್ಳಿ ವಲಯದಲ್ಲಿ ಹುಲಿಯ ಕಳೆಬರಹ ಪತ್ತೆಯಾಗಿದೆ.

ವಿಷಯ ತಿಳಿದೊಡನೆ ಹುಲಿ ಯೋಜನಾ ನಿರ್ದೇಶಕ ಮಹೇಶ್‌ಕುಮಾರ್, ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ನಾರಾಯಣ ನಾಯಕ, ಪಶು ವೈದ್ಯಾಧಿಕಾರಿ ಡಾ.ಮುಜೀಬುರ್ ರೆಹಮಾನ್, ಎಸಿಎಫ್ ಸತೀಶ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಉನ್ನತ ಅಧಿಕಾರಿಗಳ ಸಮ್ಮುಖದಲ್ಲೇ ನಿಯಾವಳಿಯಂತೆ ಮರಣೋತ್ತರ ಪರೀಕ್ಷೆ ನಡೆದಿದೆ.

‘11 ವರ್ಷ ಪ್ರಾಯದ ಗಂಡು ಹುಲಿ ಸ್ವಾಭಾವಿಕವಾಗಿಯೇ ಮೃತಪಟ್ಟಿದೆ. ಹುಲಿಯ ಹಲ್ಲು, ಕಾಲುಗಳ ಉಗುರು ಯಥಾಸ್ಥಿತಿಯಂತೆ ಇವೆ. ಯಾವುದೇ ಅನುಮಾನ ಕಾಣಿಸಿಲ್ಲ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು