ಮಂಗಳವಾರ, ಮಾರ್ಚ್ 28, 2023
33 °C

ಹುಲಿ ಹತ್ಯೆ ಪ್ರಕರಣ; ಮತ್ತಿಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಕಲ್ಲಹಳ್ಳ ವಲಯದಲ್ಲಿ ಆ .26ರಂದು ನಡೆದ ಹುಲಿ ಹತ್ಯೆ ಪ್ರಕರಣಕ್ಕೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 5ಕ್ಕೆ ಏರಿದೆ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.

ಅರಣ್ಯದಲ್ಲಿ ಹುಲಿಯನ್ನು ಹತ್ಯೆ ಮಾಡಿದ ಆರೋಪಿ ಸಂತೋಷ್ ನೀಡಿದ ಮಾಹಿತಿ ಮೇಲೆ ಶ್ವಾನದಳ ಬಳಸಿ ಇತರೆ ನಾಲ್ವರು ಆರೋಪಿಗಳನ್ನು ‍ಬಂಧಿಸಲಾಯಿತು ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಟ್ಟೆಕರೆ ಹಾಡಿಯ ಸಂತೋಷ್, ಸುಳುಗೋಡು ಗ್ರಾಮದ ಕಾಂಡೇರ ಶಶಿ, ಕೆ.ಪಿ.ಉತ್ತಪ್ಪ, ನಿಟ್ಟೂರು ಗ್ರಾಮದ ವಟ್ಟಂಗಡ ರಂಜು ಹಾಗೂ ಕೆ.ಎನ್.ರಾಜು ಬಂಧಿತರು.

ಆರೋಪಿಗಳಿಂದ ಹುಲಿಯ 13 ಉಗುರು ಹಾಗೂ 2 ಕೋರೆ ಹಲ್ಲು ಸೇರಿದಂತೆ 2 ಬೈಕ್ ಮತ್ತು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಪೈಕಿ ಕೆ.ಎನ್ ರಾಜು ಹತ್ತು ವರ್ಷದ ಹಿಂದೆ ಬೇಟೆ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.