ಮೈಸೂರು: ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದೆಡೆ ತರಕಾರಿಗಳ ಆವಕ ಹೆಚ್ಚಾಗಿ ಬೆಲೆ ಕುಸಿಯುತ್ತಿದ್ದು, ಬೆಳೆಗಾರರು ಲಾಭ ಇಲ್ಲವೆಂದು ಪರಿತಪಿಸುತ್ತಿದ್ದಾರೆ. ಮತ್ತೊಂದೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿಗಳ ದರಗಳು ಸಗಟು ಬೆಲೆಯಲ್ಲಿ ಕಡಿಮೆಯಾದಷ್ಟು ಪ್ರಮಾಣದಲ್ಲಿ ಕಡಿಮೆಯಾಗದೇ ಗ್ರಾಹಕರಿಗೂ ಅನುಕೂಲವಾಗುತ್ತಿಲ್ಲ.

ಕಳೆದ ವಾರ ಕೆ.ಜಿಗೆ ₹ 20 ಇದ್ದ ಬೀನ್ಸ್ ಧಾರಣೆ, ಈ ವಾರ ಕೆ.ಜಿಗೆ ₹ 10ಕ್ಕೆ ಕುಸಿದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರವು ಕೆ.ಜಿಗೆ ₹ 25ಕ್ಕೂ ಹೆಚ್ಚಿದೆ. ಇದೇ ಅವಸ್ಥೆ ಬಹುತೇಕ ಎಲ್ಲ ತರಕಾರಿಗಳದ್ದಾಗಿದೆ.

ಸೋಮವಾರ ಒಂದೇ ದಿನ 1,737 ಕ್ವಿಂಟಲ್‌ನಷ್ಟು ಎಲೆಕೋಸು ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬಂದಿತ್ತು. ಇದರಿಂದ ದರವು ಕೆ.ಜಿಗೆ ₹ 4ಕ್ಕೆ ಕುಸಿತ ಕಂಡಿತು. ಬದನೆಕಾಯಿ ದರ ಕೆ.ಜಿಗೆ ₹ 7ರಿಂದ ₹ 5ಕ್ಕೆ ಕಡಿಮೆಯಾಯಿತು. ಬಂದಿದ್ದ ಬಹುಪಾಲು ರೈತರು ಇದರಿಂದ ನಿರಾಶರಾದರು.

ಈ ಕುರಿತು ಪ್ರತಿಕ್ರಿಯಿಸಿದ ನಂಜನಗೂಡಿನ ರೈತ ಮಹದೇವಪ್ಪ, ‘ದರ ಕೇಳಿ ಗಿಡದಿಂದ ಎಲೆಕೋಸನ್ನು ಕೀಳುವುದೇ ಬೇಡ ಎನ್ನಿಸಿದೆ. ನಿಜಕ್ಕೂ ಕೂಲಿ ಹಾಗೂ ಸಾಗಾಣಿಕೆ ವೆಚ್ಚ ಸಿಗುತ್ತಿಲ್ಲ. ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿಲ್ಲ. ಏನು ಮಾಡುವುದೋ ಗೊತ್ತಾಗುತ್ತಿಲ್ಲ’ ಎಂದು ನಿಡುಸುಯ್ಯುತ್ತಾರೆ.

ಹಸಿಮೆಣಸಿನಕಾಯಿ ದರ ಕೆ.ಜಿಗೆ ₹ 10, ದಪ್ಪಮೆಣಸಿನಕಾಯಿ ದರ ₹ 12, ಟೊಮೆಟೊ ₹ 6 ಹೀಗೆ ಬಹುತೇಕ ಎಲ್ಲ ತರಕಾರಿಗಳ ಧಾರಣೆ ಇಳಿಕೆಗತಿಯಲ್ಲೇ ಮುಂದುವರಿದಿದೆ.

ಏಲಕ್ಕಿ ಬಾಳೆಹಣ್ಣಿನ ದರವು ಏರಿಳಿತದ ಸ್ಥಿತಿಯಲ್ಲಿದೆ. ಕುಸಿದಿದ್ದ ನೇಂದ್ರಬಾಳೆ ಅಲ್ಪ ಚೇತರಿಕೆ ಕಂಡಿದ್ದರೆ, ಏಲಕ್ಕಿ ಬಾಳೆಹಣ್ಣಿನ ದರ ಕೆ.ಜಿಗೆ ₹ 50ರ ಆಸುಪಾಸಿನಲ್ಲಿದೆ.

ಚೇತರಿಕೆ ಕಾಣದ ಮೊಟ್ಟೆದರ

ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಚೇತರಿಕೆ ಕಂಡಿಲ್ಲ. ಕಳೆದ ತಿಂಗಳ ಆರಂಭದಲ್ಲಿ ₹ 3.94 ಇದ್ದ ದರ ಈಗ ₹ 3.75 ಇದೆ. ಕಳೆದ ವರ್ಷ ಇದೇ ದಿನ ₹ 4.35 ದಾಖಲಾಗಿತ್ತು.

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ; 07; 06

ಬೀನ್ಸ್ ; 20; 10

ಕ್ಯಾರೆಟ್; 35; 25

ಎಲೆಕೋಸು; 05; 04

ದಪ್ಪಮೆಣಸಿನಕಾಯಿ; 14; 12

ಬದನೆ ; 07; 05

ಹಸಿಮೆಣಸಿನಕಾಯಿ; 10; 10

ಈರುಳ್ಳಿ; 24; 22

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.