ಬುಧವಾರ, ನವೆಂಬರ್ 25, 2020
23 °C
ನಗರ ಪೊಲೀಸರಿಂದ ಕಾರ್ಯಾಚರಣೆ: ಒಂದೇ ದಿನ ₹ 1.90 ಲಕ್ಷ ದಂಡ ವಸೂಲು, ಸಾರ್ವಜನಿಕರಿಗೆ ತಿಳಿವಳಿಕೆ

ಮಾಸ್ಕ್ ಧರಿಸದವರ ಮೇಲೆ ಪೊಲೀಸರ ನಿಗಾ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮಾಸ್ಕ್ ಧರಿಸದೆ ಸಂಚರಿಸುವವರ ಮೇಲೆ ಹದ್ದಿನಕಣ್ಣು ನೆಟ್ಟಿರುವ ನಗರ ಪೊಲೀಸರು ಶನಿವಾರ ಒಂದೇ ದಿನ 1,024 ಮಂದಿಗೆ, ಒಟ್ಟು ₹ 1.90 ಲಕ್ಷ ದಂಡ ವಿಧಿಸಿದ್ದಾರೆ.‌ ಸಿದ್ಧಾರ್ಥ ನಗರ ಸಂಚಾರ ಠಾಣೆ ಪೊಲೀಸರು 84 ಮಂದಿಯಿಂದ ₹ 19,800 ದಂಡ ವಸೂಲು ಮಾಡಿದ್ದಾರೆ.

ಉಳಿದಂತೆ, ಉದಯಗಿರಿ ಪೊಲೀಸರು ₹ 15,500, ದೇವರಾಜ ಸಂಚಾರ, ಲಷ್ಕರ್ ಹಾಗೂ ದೇವರಾಜ ಠಾಣಾ ವ್ಯಾಪ್ತಿಯಲ್ಲಿ ತಲಾ ₹ 13,250 ಮೊತ್ತದಷ್ಟು ದಂಡ ವಿಧಿಸಿದ್ದಾರೆ. ವಿ.ವಿ ಪುರಂ, ನಜರ್‌ಬಾದ್, ಆಲನಹಳ್ಳಿ, ಲಕ್ಷ್ಮೀಪುರಂ ಠಾಣಾ ವ್ಯಾಪ್ತಿಗಳಲ್ಲಿ ₹ 10 ಸಾವಿರಕ್ಕೂ ಹೆಚ್ಚು ದಂಡ ವಿಧಿಸಲಾಗಿದೆ.

ದ್ವಿಚಕ್ರ ವಾಹನಗಳಲ್ಲಿ ಸಂಚರಿಸು ವವರು, ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಮಾಸ್ಕ್ ಧರಿಸದೇ ಇರುವುದಕ್ಕೆ ಪೊಲೀಸರು ₹ 250ರವರೆಗೂ ದಂಡ ವಿಧಿಸುತ್ತಿದ್ದಾರೆ.

ಜುಲೈನಿಂದ ಇಲ್ಲಿವರೆಗೆ ₹ 39.79 ಲಕ್ಷ ದಂಡ!: ಜುಲೈ 8ರಿಂದ ಇಲ್ಲಿಯವರೆಗೆ ಪೊಲೀಸರು 17,177 ಪ್ರಕರಣಗಳನ್ನು ದಾಖಲಿಸಿ ₹ 39.79 ಲಕ್ಷ ದಂಡವನ್ನು ವಸೂಲು ಮಾಡಿದ್ದಾರೆ. ಇದರಲ್ಲಿ ಸಿದ್ಧಾರ್ಥ ಸಂಚಾರ ಠಾಣೆಯ ಪೊಲೀಸರು 1,680 ‍ಪ್ರಕರಣಗಳನ್ನು ದಾಖಲಿಸಿ ₹ 4.14 ಲಕ್ಷ ದಂಡ ವಸೂಲು ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.‌ ದೇವರಾಜ ಠಾಣಾ ಪೊಲೀಸರು ₹ 2.85 ಲಕ್ಷ ದಂಡ ವಿಧಿಸಿ, 2ನೇ ಸ್ಥಾನದಲ್ಲಿದ್ದಾರೆ.

ಎಲ್ಲ ಠಾಣೆಯ ಪೊಲೀಸರು, ಸಂಚಾರ ಪೊಲೀಸರು ಮಾಸ್ಕ್ ಧರಿಸದ ವರಿಂದ ದಂಡ ವಸೂಲು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ದಂಡ ಹಾಕುವುದು ಹೆಚ್ಚಾದರೆ ಜನರು ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸುತ್ತಾರೆ. ಈ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂಬುದು ಪೊಲೀಸರ ಲೆಕ್ಕಾಚಾರ.

ಸಮರ್ಪಕವಾಗಿ ‘ಮಾಸ್ಕ್’ ಹಾಕದ ಸಾರ್ವಜನಿಕರು: ಪೊಲೀಸರ ಭಯಕ್ಕೆ ಮಾಸ್ಕ್ ಧರಿಸುವ ಬಹಳಷ್ಟು ಮಂದಿ ಸಮರ್ಪಕವಾಗಿ ಮಾಸ್ಕ್ ಧರಿಸದೇ ಓಡಾಡುವುದು ಎಲ್ಲೆಡೆ ಕಂಡು ಬರುತ್ತಿದೆ. ಮೂಗಿನಿಂದ ಕೆಳಗೆ, ಕೇವಲ ಗದ್ದಕ್ಕೆ ಮಾತ್ರವಷ್ಟೇ ಮಾಸ್ಕ್ ಹಾಕಿರುತ್ತಾರೆ. ಎಲ್ಲೆಂದರಲ್ಲಿ ಉಗುಳುವವರಿಗೇನೂ ಕಡಿಮೆ ಇಲ್ಲ. ಪೊಲೀಸರು ಇಂಥವರ ಮೇಲೂ ನಿಗಾ ಇರಿಸಿ, ತಿಳಿವಳಿಕೆ ನೀಡಬೇಕಿದೆ ಎಂಬುದು ಸಾರ್ವಜನಿಕರ ಅಭಿಮತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು