ಶನಿವಾರ, ಆಗಸ್ಟ್ 13, 2022
26 °C
ಅಕ್ರಮ ಸಂಬಂಧದ ಕುರಿತು ಪ್ರಶ್ನಿಸಿದ್ದ ಪತಿ

ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು: ಅಕ್ರಮ ಸಂಬಂಧದ ಕಾರಣ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಮಾಡಿರುವ ಘಟನೆ ಸರಗೂರು ತಾಲ್ಲೂಕಿನ ಅಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ. ತನಿಖೆ ನಡೆಸಿ ಕೊಲೆಯ ಹಿಂದಿನ ರಹಸ್ಯವನ್ನು ನಂಜನಗೂಡು ಪೊಲೀಸರು ಪತ್ತೆ ಹಚ್ಚಿದ್ದು, ಪತ್ನಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸರಗೂರು ತಾಲ್ಲೂಕಿನ ಅಡ್ಡಹಳ್ಳಿ ಗ್ರಾಮದ ಶಿವರಾಜು (39) ಕೊಲೆಯಾದವರು. ಕೊಲೆ ಆರೋಪದ ಮೇಲೆ ಪತ್ನಿ ಸೌಮ್ಯಾ (31), ಪ್ರಿಯಕರ ಯೋಗೀಶ್, ಆತನ ಸ್ನೇಹಿತ ಚೆಲುವನನ್ನು ಪೊಲೀಸರು ಬಂಧಿಸಿದ್ದಾರೆ.

5 ದಿನಗಳ ಹಿಂದೆ ಶಿವರಾಜು ಅವರ ಶವ ತಾಲ್ಲೂಕಿನ ಕಪ್ಪಸೋಗೆ ಗ್ರಾಮದ ನಾಲೆಯೊಂದರಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶವವೆಂದು ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಪತ್ತೆಹಚ್ಚುವ ಸಲುವಾಗಿ ಸಿಪಿಐ ಲಕ್ಷ್ಮಿಕಾಂತ ತಳವಾರ್, ದೇವರಾಜು, ಸತೀಶ್, ಗುರು, ನವೀನ್, ಮಹೇಶ್, ಕಾಂತಮ್ಮ ಸೇರಿ 6 ಮಂದಿಯ ತಂಡವನ್ನು ರಚಿಸಿದ್ದರು.

ಅಡ್ಡಹಳ್ಳಿ ಗ್ರಾಮದ ಶಿವರಾಜು, ಸೌಮ್ಯಾ ಅವರನ್ನು ಮದುವೆಯಾಗಿ 15 ವರ್ಷಗಳಾಗಿದ್ದು, ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಶುಂಠಿ ತೋಟದ ಕೆಲಸಕ್ಕೆಂದು ಆಟೋದಲ್ಲಿ ಹೋಗುತ್ತಿದ್ದ ಸೌಮ್ಯಾ ಚಿಕ್ಕೋಡು ಗ್ರಾಮದ ಆಟೊ ಚಾಲಕ ಯೋಗೀಶ್ ನಡುವೆ ಸ್ನೇಹ ಬೆಳೆದು ಅಕ್ರಮ ಸಂಬಂಧವೂ ಇತ್ತು. ಈ ವಿಷಯ ತಿಳಿದ ಶಿವರಾಜು ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಗಲಾಟೆ ವಿಷಯವನ್ನು ಪ್ರಿಯಕರ ಯೋಗೀಶ್‍ನಿಗೆ ತಿಳಿಸಿದಾಗ ಆತನ ಸ್ನೇಹಿತ ಚೆಲುವನ ಜೊತೆ ಸೇರಿ ಮೂವರು ಸೇರಿ ಶಿವರಾಜುವನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.