ಮಂಗಳವಾರ, ಅಕ್ಟೋಬರ್ 27, 2020
28 °C

ವನ್ಯ ಪ್ರಾಣಿ ಛಾಯಾಗ್ರಹಣ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಅ.1ರಿಂದ 7ರವರೆಗೂ ವನ್ಯಪ್ರಾಣಿ ಸಪ್ತಾಹ ಆಯೋಜಿಸಿದೆ.

ಈ ಸಪ್ತಾಹದ ಅಂಗವಾಗಿ ವನ್ಯಪ್ರಾಣಿ ಛಾಯಾಗ್ರಹಣ ಸ್ಪರ್ಧೆ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಂಡಿದೆ.

ವನ್ಯಜೀವಿ ಪ್ರವರ್ಗ, ಮೃಗಾಲಯ ಪ್ರವರ್ಗದಡಿ ಸ್ಪರ್ಧೆ ನಡೆಯಲಿದ್ದು, ಪ್ರತಿ ಪ್ರವರ್ಗಕ್ಕೂ ಪ‍್ರವೇಶ ಶುಲ್ಕ ₹ 100 ನಿಗದಿ ಪಡಿಸಲಾಗಿದೆ.

ಸೆ.22ರವರೆಗೂ ಪ್ರವೇಶ ಸ್ವೀಕರಿಸಲು ಅವಕಾಶವಿದೆ. 26ರಂದು ಬಹುಮಾನಿತರನ್ನು ಆಯ್ಕೆ ಮಾಡಲಾಗುವುದು. ಅ.1ರಿಂದ 7ರವರೆಗೂ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ.

ಮಾಹಿತಿಗಾಗಿ 0821–2440752/9686668099 ಸಂಪರ್ಕಿಸಿ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.