ಸೋಮವಾರ, ಜನವರಿ 18, 2021
27 °C
ಗ್ರಾ.ಪಂ ಚುನಾವಣೆ-–ಪಕ್ಷ ರಾಜಕಾರಣ ಬೇಡ: ಜಿಟಿಡಿ

ಇನ್ನೂ 2 ವರ್ಷ ಜೆಡಿಎಸ್‌ ಬಿಡಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಇನ್ನೂ ಎರಡು ವರ್ಷ ಜೆಡಿಎಸ್‌ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್‌ ಶಾಸಕನಾಗಿಯೇ ಕೆಲಸ ಮಾಡುತ್ತೇನೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಇಲ್ಲಿ ತಿಳಿಸಿದರು.

‘ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಯಾವ ಸ್ವರೂಪದಲ್ಲಿ ಇರಲಿವೆ ಎಂಬುದನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇನೆ. ಕ್ಷೇತ್ರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡುತ್ತೇನೆ. ಈಗ ಯಾವುದೇ ತೀರ್ಮಾನ ಕೈಗೊಳ್ಳಲ್ಲ’ ಎಂದರು.

‘ರಾಜ್ಯ, ರಾಷ್ಟ್ರ ಮಟ್ಟದ ರಾಜ ಕೀಯದಲ್ಲಿ ರಾಜಕಾರಣ ಮಾಡಿ. ಆದರೆ, ದಯವಿಟ್ಟು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 3 ಪಕ್ಷಗಳು ರಾಜಕೀಯ ಮಾಡ ಬಾರದು. ಉತ್ತಮವಾಗಿ ಸೇವೆ ಸಲ್ಲಿಸುವವರನ್ನು ಜನರೇ ಆಯ್ಕೆ ಮಾಡಿ ಕೊಳ್ಳುತ್ತಾರೆ’ ಎಂದು ನುಡಿದರು.
‘ಬಿಜೆಪಿಯವರು ಪಂಚಾಯಿತಿಯಿಂದ ರಾಷ್ಟ್ರಮಟ್ಟದವರೆಗೆ ರಾಜಕಾರಣ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನವರು ಈಗಾ ಗಲೇ ಪ್ರಚಾರ ಕೈಗೊಂಡಿರು ವುದಾಗಿ ಹೇಳಿದ್ದಾರೆ. ಜೆಡಿಎಸ್‌ನವರೂ ಇದೇ ರೀತಿ ಮಾಡುತ್ತಿದ್ದಾರೆ’ ಎಂದರು.

‘ಯಾರು ಪಿಂಚಣಿ ಮಾಡಿಸಿಕೊ ಡುತ್ತಾರೆ, ಯಾರು ಗ್ರಾಮದಲ್ಲಿ ವಿದ್ಯುತ್‌ ಬಲ್ಬು ಹಾಕಿಸಿಕೊಡುತ್ತಾರೆ, ಯಾರು ಸ್ವಚ್ಛತೆ ಕಾರ್ಯ ಕೈಗೊಳ್ಳುತ್ತಾರೆ, ಕಷ್ಟಕ್ಕೆ ಯಾರು ಸ್ಪಂದಿಸುತ್ತಾರೆ ಅಂಥವರನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಚುನಾವಣೆಯಲ್ಲಿ ಯಾವುದೇ ಚಿಹ್ನೆ ಇರುವುದಿಲ್ಲ. ಹೀಗಾಗಿ, ಪಕ್ಷಾತೀತವಾಗಿ ನಡೆಯಬೇಕು. ದಯವಿಟ್ಟು ಪಕ್ಷವನ್ನು ಇಲ್ಲಿಗೆ ತರದೇ ಜನರ ನಿರ್ಧಾರಕ್ಕೆ ಬಿಡಿ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು