ಭಾನುವಾರ, ಆಗಸ್ಟ್ 1, 2021
21 °C

ಮೈಸೂರು: ಈಜಲು ಹೋಗಿ ಮುಳುಗಿದ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಎನ್.ಆರ್.ಮೊಹಲ್ಲಾ ನಿವಾಸಿ ರಾಚಪ್ಪಾಜಿ (22) ಅವರು ಮಂಗಳವಾರ ಹಳೆ ಕೆಸರೆಯ ಕೆರೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಕೆರೆಯಲ್ಲಿ ಹುಡುಕಾಟ ನಡೆದಿದೆ.

ತಮ್ಮ ಭಾವನ ಜತೆಗೆ ಇವರು ಮಧ್ಯಾಹ್ನ ನೀರಿನಲ್ಲಿ ಈಜಲು ಧುಮುಕಿದರು. ಆದರೆ, ಸ್ವಲ್ಪ ಸಮಯದ ನಂತರ ಇವರು ಮುಳುಗತೊಡಗಿದರು. ಎಷ್ಟೇ ಪ್ರಯತ್ನ ಪಟ್ಟರು ಇವರನ್ನು ಮೇಲೆ ತರಲು ಆಗಲಿಲ್ಲ. ಮುಳುಗಿದ ಇವರಿಗಾಗಿ ಅಗ್ನಿಶಾಮಕ ಪಡೆಯವರೊಂದಿಗೆ ನೀರಿನಲ್ಲಿ ಶೋಧ ಕಾರ್ಯ ನಡೆಸಿದರೂ ಪ್ರಯೋಜನವಾಗಲಿಲ್ಲ. ಮತ್ತೆ ಬುಧವಾರ ಬೆಳಿಗ್ಗೆ ಶೋಧ ಕಾರ್ಯ ನಡೆಸಲಾಗುವುದು ಎಂದು ಎನ್.ಆರ್.ಠಾಣೆ ಪೊಲೀಸರು ತಿಳಿಸಿದ್ದಾರೆ.

ಗುರುತು ಸಿಗದ ಶವ ‍ಪತ್ತೆ

ಮೈಸೂರು: ಇಲ್ಲಿನ ಶಾರದಾದೇವಿ ನಗರದ ಖಾಲಿ ಮಾರುಕಟ್ಟೆಯಲ್ಲಿ ಪುರುಷರೊಬ್ಬರ ಮೃತದೇಹ ಪತ್ತೆಯಾಗಿದೆ. ಇವರ ಗುರುತು ಪತ್ತೆಯಾಗಿಲ್ಲ.

ಮೇಲ್ನೋಟಕ್ಕೆ ಇವರು ನಿರಾಶ್ರಿತರಂತೆ ಕಾಣುತ್ತಿದ್ದು, ದಿನವೂ ಇಲ್ಲೇ ಮಲಗುತ್ತಿದ್ದರು. 35ರಿಂದ 40 ವರ್ಷ ವಯಸ್ಸಿನ ಇವರ ಸಾವಿಗೆ ಕಾರಣ ಗೊತ್ತಾಗಿಲ್ಲ. ಮೃತದೇಹದ ಗುರುತು ಸಿಕ್ಕವರು ದೂ: 0821–2418123 ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸರಸ್ವತಿಪುರಂ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು