ತಿ.ನರಸೀಪುರ: ಐಸಿಎಸ್ಇ ಪಠ್ಯಕ್ರಮದ 2025ನೇ ಸಾಲಿನ ಹತ್ತನೇ ತರಗತಿ ಫಲಿತಾಂಶದಲ್ಲಿ ತಾಲ್ಲೂಕಿನ ಬನ್ನೂರು ಸಮೀಪದ ಕಂಚನಹಳ್ಳಿ ಗ್ರಾಮದ ಶ್ರೀ ಪ್ರಜ್ಞಾ ಗುರುಕುಲ ಐಸಿಎಸ್ಇ ಶಾಲೆಗೆ ಶೇ 100ರಷ್ಟು ಫಲಿತಾಂಶ ದೊರಕಿದೆ.

‘ಪರೀಕ್ಷೆಗೆ ಹಾಜರಾಗಿದ್ದ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಐವರು ವಿದ್ಯಾರ್ಥಿಗಳು ಶೇ 80ಕ್ಕಿಂತ ಹೆಚ್ಚು ಅಂಕ ಪಡೆದು ಉನ್ನತ ಶ್ರೇಣಿ ಪಡೆದಿದ್ದಾರೆ. ಬಿ.ಕೆ.ಪ್ರಕೃತಿ (88.2), ಕವನ ಎನ್. (ಶೇ 88), ಎಸ್.ಚೈತನ್ಯ (ಶೇ.86), ಜೀವಿತ ಎಚ್.ಎಲ್.(ಶೇ 86), ಶಿವಿಕಾ ಎ.(ಶೇ 82) ಉನ್ನತ ಶ್ರೇಣಿ ಪಡೆದವರು. ಉಳಿದಂತೆ 9 ವಿದ್ಯಾರ್ಥಿಗಳು ಶೇ 70ಕ್ಕಿಂತ ಹೆಚ್ಚು, ನಾಲ್ವರು ವಿದ್ಯಾರ್ಥಿಗಳು ಶೇ 60ಕ್ಕಿಂತ ಹಾಗೂ 6 ವಿದ್ಯಾರ್ಥಿಗಳು ಶೇ 50ಕ್ಕಿಂತ ಹೆಚ್ಚು ಅಂಕಗಳಿಸಿದ್ದು ಉಳಿದ ಮೂವರು ಶೇ 40ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ’ ಎಂದು ಶಾಲೆಯ ಪ್ರಾಂಶುಪಾಲ ಎಚ್.ಎಸ್.ಶಂಕರೇಗೌಡ ತಿಳಿಸಿದ್ದಾರೆ.

ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಬಿ.ಸಿದ್ದೇಗೌಡ ಹಾಗೂ ಕಾರ್ಯದರ್ಶಿ ತೇಜಾ ಸಿದ್ದೇಗೌಡ ಹಾಗೂ ಶಾಲಾ ಸಿಬ್ಬಂದಿ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.