ಮೈಸೂರು:ನಗರದ ಚಾಮುಂಡಿಬೆಟ್ಟದ ತಪ್ಪಲಿನ 2 ಸಾವಿರ ಎಕರೆ ಜಮೀನಿನ ಖಾತೆ ಬದಲಾವಣೆ ಹಗರಣವನ್ನು ಬಯಲಿಗೆಳೆದಿದ್ದ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ (ಮುಡಾ) ವ್ಯಾಪ್ತಿಯ ವಿಜಯನಗರದ ಎರಡನೇ ಹಂತದಲ್ಲಿನ 9 ನಾಗರಿಕ ಸೌಕರ್ಯ (ಸಿಎ) ನಿವೇಶನಗಳನ್ನು ಕಾನೂನು ಬಾಹಿರವಾಗಿ ವಿದ್ಯಾಶ್ರಮ ಎಜುಕೇಷನ್ ಫೌಂಡೇಷನ್ ಹಾಗೂ ಇಮ್ಯಾ ಕುಲೇಟ್ ಹಾರ್ಟ್ ಕಾನ್ವೆಂಟ್ಗೆ ನೀಡಲು ಪ್ರಭಾವ ಬೀರಿದ್ದಾರೆ ಎಂದು ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ದೂರಿದ್ದಾರೆ.

`ಹಿನಕಲ್ನ ಸರ್ವೆ ನಂಬರ್ 181, 186ರ 36/1, 36/2, 37, 38ರ (1.30 ಎಕರೆ) ಸಿ.ಎ. ನಿವೇಶನವನ್ನು ಜೂನ್ 22 ರಂದು ವಿದ್ಯಾಶ್ರಮಕ್ಕೆ ನೀಡಲಾ ಗಿದೆ. ಅದೇ ಸರ್ವೆ ನಂಬರ್ನ 34ರ ಸಿ.ಎ ನಿವೇಶನ ವನ್ನು ಇಮ್ಯಾಕುಲೇಟ್ ಹಾರ್ಟ್ ಕಾನ್ವೆಂಟ್ಗೆ ಮಂಜೂರು ಮಾಡುವಂತೆ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾರ್ಚ್ 21ರಂದು ಆದೇಶ ನೀಡಿದ್ದಾರೆ. ಶೈಕ್ಷಣಿಕ ಉದ್ದೇಶಕ್ಕಾಗಿ ನಿವೇಶನ ನೀಡುವಂತೆ ಗೋ.ಮಧುಸೂದನ್ ಸಿಎಂ ಮೇಲೆ ಪ್ರಭಾವ ಬೀರಲು ಬರೆದ ಪತ್ರ ಮಾಹಿತಿ ಹಕ್ಕಿನಡಿ ಲಭಿಸಿದ್ದು, ತನಿಖೆಗೆ ಆದೇಶಿಸಿ' ಎಂದು ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

`ಕ್ರೀಡಾಂಗಣ, ಸಮುದಾಯ ಭವನ, ಗ್ರಂಥಾ ಲಯ ಹಾಗೂ ಆಸ್ಪತ್ರೆ ನಿರ್ಮಿಸಲು ಸಿಎ ನಿವೇಶನ ನೀಡಬೇಕು ಎಂಬ ನಿಯಮವಿದೆ. ಆದರೆ ಇಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಎಂದು ನಮೂದಿಸಲಾ ಗಿದೆ. ಸಿಎ ನಿವೇಶನಕ್ಕಾಗಿ ಮುಡಾ ಅರ್ಜಿ ಆಹ್ವಾನಿಸಿ, ಹಿರಿತನದ ಆಧಾರದ ಮೇಲೆ ವಿತರಿಸ ಬೇಕು. ಈ ನಿಯಮವನ್ನೂ ಉಲ್ಲಂಘಿಸಿ ಎರಡು ಸಂಸ್ಥೆಗಳಿಗೆ ನಿವೇಶನ ಮಂಜೂರೂ ಮಾಡಲಾಗಿದ್ದು, ಇದು ಡಿನೋಟಿಫಿಕೇಷನ್ಗೆ ಪರ್ಯಾಯವಾಗಿ ಹುಟ್ಟಿದ ದಂಧೆ' ಎಂದರು.

`ಮೇ 5 ರಂದು ವಿದ್ಯಾಶ್ರಮ ಎಜುಕೇಷನ್ ಫೌಂಡೇಷನ್ ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಅದೇ ದಿನ ಮುಡಾ ಆಯುಕ್ತರಿಗೆ ಸೂಚಿಸಿದ್ದಾರೆ. ಕಾನೂನು ಇಲಾಖೆ ಇದು ನಿಯಮ ಬಾಹಿರ ಎಂಬ ಎಚ್ಚರಿಕೆ ಕೂಡ ನೀಡಿದೆ. ಆ ಬಳಿಕ ಜೂನ್ 22 ರಂದು ಡಿ.ವಿ.ಸದಾನಂದಗೌಡ ಅವರು ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಆದೇಶಿ ಸಿದ್ದಾರೆ.

ರೂ.45 ಕೋಟಿ ಮೌಲ್ಯದ ನಿವೇಶನ ವನ್ನು ಮುಡಾ ಆಯುಕ್ತರು ಕೇವಲ ರೂ.7 ಲಕ್ಷಕ್ಕೆ ಹತ್ತು ವರ್ಷದ ಗುತ್ತಿಗೆ ಆಧಾರದ ಮೇಲೆ ನೀಡಿದ್ದಾರೆ. ಚದರ ಅಡಿಗೆ ರೂ.3.5 ಸಾವಿರದಂತೆ ಹತ್ತು ಕಂತುಗಳಲ್ಲಿ ಹಣ ಪಾವತಿಸಲು ಅವಕಾಶ ನೀಡಲಾಗಿದೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ವಿದ್ಯಾಶ್ರಮಕ್ಕೆ ಅದೇ ಸರ್ವೆನಂಬರ್ನಲ್ಲಿ ಮತ್ತೆ ಮೂರು ನಿವೇಶನ ನೀಡಲಾಗಿದೆ. ಹೀಗಾಗಿ ಮುಡಾ ಆಯುಕ್ತರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

`ಸಿಎ ನಿವೇಶನಕ್ಕಾಗಿ ಕಳೆದ 25 ವರ್ಷದಿಂದ ಅನೇಕ ಸಂಘ ಸಂಸ್ಥೆಗಳು ಅರ್ಜಿ ಸಲ್ಲಿಸುತ್ತಿವೆ. ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಅನೇಕ ಸಂಸ್ಥೆಗಳಿಗೆ ಇನ್ನೂ ಮಂಜೂರು ಮಾಡಿಲ್ಲ. ಆದರೆ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಡೊನೇಷನ್ ವಸೂಲಿ ಮಾಡುವ ಕಾಲೇಜಿಗೆ ನೀಡಿರುವುದು ಖಂಡನೀಯ. ಮುಡಾ ಸದಸ್ಯರಾ ಗಿರುವ ಗೋ.ಮಧುಸೂದನ್ ಅಧಿಕಾರ ದುರ್ಬ ಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್ಕುಮಾರ್ ಪಾತ್ರವೂ ಇದೆ. ಸಿಬಿಐ ತನಿಖೆಗೆ ಆದೇಶಿಸುವಂತೆ ಮುಂದಿನ ವಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.