ನ್ಯಾಯಾಲಯದ ಆದೇಶದ ಬಗ್ಗೆ ಅಸಮಾಧಾನವಿದ್ದು ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದೇವೆ. ಕುಶಾಲನಗರ ಠಾಣೆಯವರನ್ನೂ ಸೇರಿಸಿ ತನಿಖೆಯಲ್ಲಿ ಭಾಗಿಯಾಗಿ ಸುಳ್ಳು ಪ್ರಕರಣ ದಾಖಲಿಸಿದ ಅಧಿಕಾರಿಗಳೆಲ್ಲರಿಗೂ ಶಿಕ್ಷೆಯಾಗಬೇಕು. ಕಕ್ಷಿದಾರನಿಗೆ ಹೆಚ್ಚಿನ ಪರಿಹಾರ ದೊರೆಯಬೇಕು
ಪಾಂಡು ಪೂಜಾರಿ, ಸುರೇಶ್ ಪರ ವಕೀಲ
ಆರೋಪ ಸಾಬೀತುಪಡಿಸದಿದ್ದರೆ ನ್ಯಾಯಾಲಯವು ಸಾಮಾನ್ಯವಾಗಿ ಆರೋಪಿಯನ್ನು ಬಿಡುಗಡೆ ಮಾಡುತ್ತದೆ. ಆದರೆ ಈ ಪ್ರಕರಣದಲ್ಲಿ ಸುರೇಶ್ ನಿರಪರಾಧಿಯಾಗಿ ಬಿಡುಗಡೆಯಾಗಿರುವುದು ವಿಶೇಷ. ಕೆಲವೇ ಪ್ರಕರಣದಲ್ಲಿ ಈ ರೀತಿಯ ಆದೇಶ ಬಂದಿದೆ.