ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊ ನಕಲಿ ; ಅನುಕಂಪ ಸೃಷ್ಟಿಸುವ ಯತ್ನ- ಫಾದರ್‌ ಜ್ಞಾನಪ್ರಕಾಶ್‌

ಕೆ.ಎಂ.ವಿಲಿಯಂ ಅವರ ಕೊಲೆಗೆ ಪಿತೂರಿ ಆರೋಪ; ಸೈಬರ್‌ ಠಾಣೆಗೆ ದೂರು
Published 18 ಜನವರಿ 2024, 14:11 IST
Last Updated 18 ಜನವರಿ 2024, 14:11 IST
ಅಕ್ಷರ ಗಾತ್ರ

ಮೈಸೂರು: ‘ಧರ್ಮಾಧ್ಯಕ್ಷರಾಗಿದ್ದ ಕೆ.ಎಂ.ವಿಲಿಯಂ ಅವರ ಕೊಲೆಗೆ ಪಿತೂರಿ ನಡೆಸುತ್ತಿರುವ ಆಡಿಯೊ ಎಂದು ನನ್ನ ಹಾಗೂ ಇತರ ಫಾದರ್‌ಗಳ ಚಿತ್ರಗಳೊಂದಿಗೆ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿರುವ ವಿಡಿಯೊ ನಕಲಿಯಾಗಿದೆ. ಈ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಫಾದರ್‌ ಜ್ಞಾನಪ್ರಕಾಶ್‌ ತಿಳಿಸಿದರು.

ಮೈಸೂರು ಡಿವಿಜನ್‌ ಕ್ಯಾಥೋಲಿಕ್‌ ಕ್ರಿಶ್ಚಿಯನ್‌ ಅಸೋಸಿಯೇಶನ್‌ನಿಂದ ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ, ಫಾದರ್ ರೋಹನ್, ಫಾದರ್ ಅಂತೋಣಿರಾಜ್ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.

‘ಜ.13ರಂದು ಪೋಪ್‌ ಫ್ರಾನ್ಸಿಸ್‌ ಅವರ ಪತ್ರದಂತೆ ಧರ್ಮಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ವಿಲಿಯಂ ಅವರು ರಾಜೀನಾಮೆ ನೀಡಿದ್ದು, ಅಂಗೀಕಾರವೂ ಆಗಿದೆ. ಆದರೆ, ರಾಜೀನಾಮೆ ಬಗ್ಗೆ ಸಮುದಾಯದಲ್ಲಿ ಅನುಕಂಪ ಗಿಟ್ಟಿಸಲು ಈ ಗೊಂದಲ ಸೃಷ್ಟಿಸಲಾಗಿದೆ. ನಾವು ಅವರ ವಿರುದ್ಧ ಸತ್ಯ ಸಂಗತಿಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೆವು. ಹಾಗಾಗಿ ನಮ್ಮ ವಿರುದ್ಧವೂ ಬಿಷಪ್‌ ಹೌಸ್‌ನಲ್ಲಿ ಗಲಾಟೆ ಮಾಡಲಾಯಿತು’ ಎಂದರು.

‘ನಾವಾಗಲಿ, ಧರ್ಮಪ್ರಾಂತದ ಜನರಾಗಲಿ ಬಿಷಪ್‌ ಅವರನ್ನು ಬದಲಾಯಿಸುವ ಅಧಿಕಾರ ಹೊಂದಿಲ್ಲ. ನಾವು ಅವರ ತಪ್ಪುಗಳನ್ನು ಮೇಲಧಿಕಾರಿಗಳಿಗೆ ತಿಳಿಸಬಹುದು. ‌ಉಳಿದದ್ದು, ಕೂಲಂಕಷ ತನಿಖೆಯೊಂದಿಗೆ ಪೋಪ್‌ ಆಣತಿಯಂತೆ ನಡೆದಿದೆ’ ಎಂದು ತಿಳಿಸಿದರು.

ಅಸೋಸಿಯೇಶನ್‌ ಅಧ್ಯಕ್ಷ ಜೆ.ಸ್ಟೀಫನ್‌ ಸುಜಿತ್‌, ಸದಸ್ಯರಾದ ಜಾನ್ಸನ್ ಬೆನ್ನ, ಮರಿಯ ಫ್ರಾನ್ಸಿಸ್, ಎಲ್ವಿನ್, ಆಂಬ್ರುಸ್ ಜಾರ್ಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT