ಮೈಸೂರು: ಎರಡೂವರೆ ದಶಕಗಳ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಪಯಣದಲ್ಲಿ ಮಹಾತ್ಮ ಗಾಂಧೀಜಿ, ರವೀಂದ್ರನಾಥ್ ಠಾಗೋರ್, ಶೇಕ್ಸ್ಪಿಯರ್, ಸೂಫಿ, ಸಂತರ ಚಿಂತನಾಧಾರೆಗಳು ರಂಗಾಯಣದ ಜೊತೆಗೂಡಿವೆ. ಈ ಬಾರಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕು–ಹೋರಾಟವನ್ನೇ ಕೇಂದ್ರೀಕರಿಸಿ ಉತ್ಸವವನ್ನು ರೂಪಿಸಲಾಗಿದೆ.

ಲಿಂಗ ಸಮಾನತೆ, ಬುಡಕಟ್ಟು, ಕೃಷಿ ಸಂಸ್ಕೃತಿ, ಬಿಡುಗಡೆ, ಭಾರತೀಯತೆ, ವಲಸೆ, ಅಭಿವ್ಯಕ್ತಿ, ತಾಯಿ ಮೊದಲಾದ ಆಶಯಗಳನ್ನಿಟ್ಟುಕೊಂಡೇ ಉತ್ಸವವನ್ನು ಆಯೋಜಿಸುವ ಪರಂಪರೆಗಿಂತ ಭಿನ್ನ ನಡೆಯನ್ನು ಉತ್ಸವಗಳು ಈ ಮೂಲಕ ತೋರಿವೆ. ಮಹನೀಯರ ಬಹುರೂಪಿ ವ್ಯಕ್ತಿತ್ವದ ಸ್ಮರಣೆ ಮತ್ತು ಅವರ ಆಶಯಗಳ ಪ್ರತಿಪಾದನೆಯೇ ಇಲ್ಲಿನ ಪ್ರಮುಖ ಉದ್ದೇಶ.

ಇಂಥ ಹೊಸ ನಡೆ–ನೋಟವನ್ನು ಆರಂಭಿಸಿದವರು ಲಿಂಗದೇವರು ಹಳೇಮನೆ. ಅವರು ರಂಗಾಯಣದ ನಿರ್ದೇಶಕರಾಗಿದ್ದ ಅವಧಿಯಲ್ಲಿ, 2011ರಲ್ಲಿ ರವೀಂದ್ರನಾಥ ಠಾಗೋರರ ಕಾವ್ಯ– ಚಿಂತನೆಗಳನ್ನು ಕೇಂದ್ರೀಕರಿಸಿ ‘ಗುರುದೇವ’ ಶೀರ್ಷಿಕೆಯಲ್ಲಿ ಉತ್ಸವ ಆಯೋಜಿಸಲಾಗಿತ್ತು. ಠಾಗೋರರ 110ನೇ ವರ್ಷದ ಸ್ಮರಣೆಯ ಕಾರಣವೂ ಉತ್ಸವಕ್ಕೆ ಒತ್ತಾಸೆಯಾಗಿತ್ತು.

ಅವರ ನಂತರ ನಿರ್ದೇಶಕರಾಗಿ ಬಂದ ಬಿ.ವಿ.ರಾಜಾರಾಂ ಅವರು 2012ರಲ್ಲಿ ಕನ್ನಡದ ಜ್ಞಾನಪೀಠ ಪುರಸ್ಕೃತರ ವಿಚಾರಧಾರೆ ಶೀರ್ಷಿಕೆಯಲ್ಲಿ ನಾಟಕೋತ್ಸವ ಆಯೋಜಿಸಿದ್ದರು. ಅದಕ್ಕೆ ಎರಡು ವರ್ಷ ಮುನ್ನ, ಚಂದ್ರಶೇಖರ ಕಂಬಾರರನ್ನು ಆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಅದೇ ಕಾರಣದಿಂದ ಕಂಬಾರರನ್ನೂ ಸೇರಿಸಿ ಕನ್ನಡದ ಎಲ್ಲ ಎಂಟು ಜ್ಞಾನಪೀಠ ಪುರಸ್ಕೃತರ ನಾಟಕಗಳನ್ನು ಪ್ರದರ್ಶಿಸಲಾಯಿತು. ಎಂಟು ಕಾಲೇಜುಗಳಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲೂ ಈ ಲೇಖಕರ ಕುರಿತು ಜಾಗೃತಿ ಮೂಡಿಸಲಾಯಿತು.

2015ರಲ್ಲಿ ಎಚ್ ಜನಾರ್ಧನ್ (ಜನ್ನಿ) ಅವರು ನಿರ್ದೇಶಕರಾದ್ದಾಗ, ಶೇಕ್ಸ್ಪಿಯರ್ನ 450ನೇ ಜನ್ಮದಿನದ ನೆನಪುಗಾಗಿ ‘ಬಹುಮುಖಿ ಶೇಕ್ಸ್ಪಿಯರ್’ ಶೀರ್ಷಿಕೆಯಲ್ಲಿ ನಾಟಕೋತ್ಸವ ಆಯೋಜಿಸಿದ್ದು ವಿಶೇಷ. ಅದಕ್ಕೂ ಮುನ್ನ ‘ಸೂಫಿ–ಸಂತ–ಸಾಮರಸ್ಯ’ ಶೀರ್ಷಿಕೆಯಲ್ಲಿ ಅವರು ನಡೆಸಿದ್ದರು.

2020ರಲ್ಲಿ ಅಡ್ಡಂಡ ಕಾರ್ಯಪ್ಪ ಅವರು ಅಧ್ಯಕ್ಷರಾಗಿದ್ದಾಗ, ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನದ ನೆನಪಿನಲ್ಲಿ ‘ಗಾಂಧಿ ಪಥ’ ಆಶಯದಲ್ಲಿ ಉತ್ಸವ ನಡೆದಿತ್ತು. ಸದ್ಯ ನಿರ್ದೇಶಕರಾಗಿರುವ ಸತೀಶ್ ತಿಪಟೂರು, ಅಂಬೇಡ್ಕರ್ ಅವರ ಸಮತೆಯ ಆಶಯದ ಪ್ರತಿಪಾದನೆಗೆ ‘ಬಹುರೂಪಿ ಬಾಬಾಸಾಹೇಬ್’ ಶೀರ್ಷಿಕೆಯಲ್ಲಿ ಉತ್ಸವವನ್ನು ಆಯೋಜಿಸಿದ್ದಾರೆ. ಅಂಬೇಡ್ಕರ್ ನಿಧನರಾಗಿ 70 ವರ್ಷವಾಗಿರುವ ಸಂದರ್ಭವೂ ಇಲ್ಲಿದೆ.

ಜಗತ್ತಿನ ಮಹಾನ್ ನಾಟಕಕಾರ ಶೇಕ್ಸ್ಪಿಯರ್ ನೆನಪಿನಲ್ಲಿ ನಾಟಕೋತ್ಸವವನ್ನು ರಂಗಾಯಣ ರೂಪಿಸಿದ್ದು ಮಹತ್ವದ ಘಟನೆ. ಕರ್ನಾಟಕದಲ್ಲಿ ಅದೊಂದು ಮಾದರಿ ನಡೆ
ಎಚ್.ಜನಾರ್ಧನ್ (ಜೆನ್ನಿ)

ಕಾವೇರಿ ಹೋರಾಟದ ಪ್ರಭಾವ!

‘ಹೋರಾಟದ ಕಿಚ್ಚು ರಾಜ್ಯದಲ್ಲಿ ತೀವ್ರಗೊಂಡಿದ್ದ ಕಾರಣ ಉತ್ಸವವವನ್ನು ನೀರಿನ ಪರಿಕಲ್ಪನೆಯಲ್ಲೇ ರೂಪಿಸಲು ನಿರ್ಧರಿಸಲಾಯಿತು. ಜೀವ–ಜಲ–ಜೀವನ ಶೀರ್ಷಿಕೆಯಲ್ಲಿ ಆಯೋಜಿಸಿ ನೀರು ಹೇಗೆ ಜನರ ಬದುಕನ್ನು ರೂಪಿಸುತ್ತದೆ. ಹೋರಾಟಗಳಿಗೆ ಪ್ರೇರಣೆಯಾಗುತ್ತದೆ ಎಂಬುದರ ಕುರಿತೇ ಚರ್ಚೆಗಳು ನಡೆದವು’ ಎಂದು ಸ್ಮರಿಸುತ್ತಾರೆ ಅಂದು ನಿರ್ದೇಶಕರಾಗಿದ್ದ ಬಿ.ವಿ.ರಾಜಾರಾಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.