ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದಪುರ: ರೈತ ಆತ್ಮಹತ್ಯೆ

Published 30 ಮೇ 2024, 12:54 IST
Last Updated 30 ಮೇ 2024, 12:54 IST
ಅಕ್ಷರ ಗಾತ್ರ

ಬೆಟ್ಟದಪುರ:  ಚಪ್ಪರದಹಳ್ಳಿ ಗ್ರಾಮದ  ರೈತ ಸುಂದರೇಶ್ (28) ಸಾಲ ತೀರಿಸಲಾಗದ ಸಮಸ್ಯೆಯಿಂದ ಬುಧವಾರ  ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಮೂರು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿಕೊಂಡಿದ್ದು,  ತಾಯಿ ಸುಶೀಲಮ್ಮನ ಹೆಸರಿನಲ್ಲಿ ಬ್ಯಾಂಕ್, ವಿವಿಧ ಖಾಸಗಿ ಹಣಕಾಸು ಸಂಘ ಸಂಸ್ಥೆಗಳಲ್ಲಿ ಸಾಲ, ಚಿನ್ನ ಅಡವಿಟ್ಟು ₹ 15 ಲಕ್ಷ  ಸಾಲ ಮಾಡಿ ಜಮೀನಿನಲ್ಲಿ ಶುಂಠಿ, ತಂಬಾಕು ಬೇಸಾಯ ಮಾಡಿದ್ದರು.  ಧಾರಾಕಾರ ಮಳೆಗೆ ಬೆಳೆ  ಕೊಚ್ಚಿ ಹೋಗಿತ್ತು.  ಸಾಲವನ್ನು ಹೇಗೆ ಮರುಪಾವತಿ ಮಾಲಾಗದ ಚಿಂತೆಯಿಂದ  ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಚಿಕ್ಕಪ್ಪ ರವಿ ಬೆಟ್ಟದಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT