ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಯೋಗ್ಯಾಸ್ ಉತ್ಪಾದನೆ ಘಟಕ ಕಾರ್ಯಾರಂಭ: ಶವಸಂಸ್ಕಾರ ಇನ್ನು ‘ಪರಿಸರ ಸ್ನೇಹಿ’

Published : 15 ಮೇ 2025, 6:14 IST
Last Updated : 15 ಮೇ 2025, 6:14 IST
ಫಾಲೋ ಮಾಡಿ
Comments
ಸ್ಮಶಾನ ಬೆಳಗಲಿದೆ ಹಸಿಕಸ!
ಮಂಚೇಗೌಡನ ಕೊಪ್ಪಲಿನ ಸ್ಮಶಾನದಲ್ಲಿಯೂ ₹98 ಲಕ್ಷ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದನಾ ಘಟಕದ ಸ್ಥಾಪನೆಗೆ ಪಾಲಿಕೆ ಯೋಜಿಸಿದೆ. ಇಲ್ಲಿ ಉತ್ಪಾದನೆ ಆಗುವ ಜೈವಿಕ ಅನಿಲವನ್ನು ವಿದ್ಯುತ್ ಆಗಿ ಪರಿವರ್ತಿಸಿ ಅದರಿಂದ ಸ್ಮಶಾನದಲ್ಲಿನ ಬೀದಿದೀಪಗಳನ್ನು ಬೆಳಗಲು ಉದ್ದೇಶಿಸಲಾಗಿದೆ. ಸುಮಾರು 14–15 ದೀಪಗಳು ಇದರಿಂದ ಬೆಳಗಲಿವೆ. ಪಾಲಿಕೆಗೆ ಬರುವ ವಿದ್ಯುತ್‌ ಬಿಲ್‌ನ ಪ್ರಮಾಣ ಸಹ ತಗ್ಗಲಿದೆ. ಇನ್ನಷ್ಟೇ ಈ ಘಟಕವು ಕಾರ್ಯಾರಂಭ ಮಾಡಬೇಕಿದೆ. ‘ಬಯೋಗ್ಯಾಸ್ ಘಟಕದಿಂದ ಪ್ರತಿ ದಿನ 100–125 ಕಿಲೋವ್ಯಾಟ್‌ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಸೆಸ್ಕ್‌ ಪ್ರತಿ ಯುನಿಟ್ ವಿದ್ಯುತ್‌ಗೆ ಸರಾಸರಿ ₹7 ದರ ವಿಧಿಸುತ್ತಿದೆ. ಈ ದರದಲ್ಲಿ 125 ಕಿಲೋವ್ಯಾಟ್‌ಗೆ ₹875 ರಷ್ಟಾಗಲಿದೆ. ತಿಂಗಳಿಗೆ ಸರಾಸರಿ ₹26 ಸಾವಿರದಷ್ಟು ಉಳಿತಾಯ ಆಗಲಿದೆ’ ಎಂದು ಪಾಲಿಕೆಯ ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT