ಮೈಸೂರು: ‘ಬ್ರಾಹ್ಮಣರು ಸಂಘಟಿತರಾಗಬೇಕು’ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಸಲಹೆ ನೀಡಿದರು.

ನಗರದ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ‘ಮೈಸೂರು ಬ್ರಾಹ್ಮಣ ಯುವ ವೇದಿಕೆ’ಯಿಂದ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿ ವಿಪ್ರರೂ ಕಡ್ಡಾಯವಾಗಿ ವಿಪ್ರ ಸಂಘಸಂಸ್ಥೆಗಳ ಮಾತೃ ಸಂಸ್ಥೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯರಾಗಬೇಕು. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣ, ಉದ್ಯೋಗ, ವೈದ್ಯಕೀಯ, ಸಹಕಾರಿ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಪ್ರೋತ್ಸಾಹ ನೀಡಲು ಮಹಾಸಭಾದ ಅಧ್ಯಕ್ಷ ರಘುನಾಥ್ ನೇತೃತ್ವದಲ್ಲಿ ಯೋಜನೆ ರೂಪಿಸಲಾಗುತ್ತಿದೆ’ ಎಂದರು.

ಮುಖಂಡ ಕೆ. ರಘುರಾಂ ವಾಜಪೇಯಿ, ‘ಮಹಾಸಭಾದಿಂದ ಯುವಕರನ್ನು ಮುಖ್ಯವಾಹಿನಿಗೆ ತರಲು ರಾಜ್ಯದೆಲ್ಲಡೆ ವಿಪ್ರ ಯುವ ವೇದಿಕೆ ಸಮಿತಿ ರಚಿಸಿ ಬಲಿಷ್ಠಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ವಿಪ್ರ ಮುಖಂಡ ನಂ.ಶ್ರೀಕಂಠಕುಮಾರ್ ಮಾತನಾಡಿ, ‘ಮೇ 2ರಂದು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿರುವ ಶಂಕರ ಜಯಂತಿ ಕಾರ್ಯಕ್ರಮಕ್ಕೆ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್. ಶ್ರೀಧರಮೂರ್ತಿ, ‘ಬ್ರಾಹ್ಮಣರನ್ನು ಉದ್ಯೋಗಸ್ಥರನ್ನಾಗಿ ಪ್ರೋತ್ಸಾಹಿಸಲು ‘ವಿಪ್ರ ಪರಿವಾರ’ ಎಂಬ ‘ಎ ಟು ಝಡ್ ಬ್ರಾಹ್ಮಿನ್ಸ್’ ಎಂಬ ಕೈಪಿಡಿ ಹೊರತರಲಾಗುತ್ತಿದೆ. ಮಹಾಸಭಾ ಸದಸ್ಯರಾಗಲು ಸಹಾಯವಾಣಿ 98807 52727 ಸಂಪರ್ಕಿಸಬೇಕು’ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ಲಕ್ಷ್ಮೀದೇವಿ, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಖಜಾಂಜಿ ಅಜಯ್ ಶಾಸ್ತ್ರಿ, ಅಗಸ್ತ್ಯ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ ಖಜಾಂಚಿ ಕೆ.ನಾಗರಾಜ್, ಸುಚೇಂದ್ರ, ಹೊಯ್ಸಳ ಕರ್ನಾಟಕ ಸಂಘದ ನಿರ್ದೇಶಕರಾದ ವಿಜಯ್ ಕುಮಾರ್, ಗುರುರಾಜ್, ಮಂಜುನಾಥ್, ಉಮೇಶ್, ಗಣೇಶ್ ಪ್ರಸಾದ್, ಓಂ ಶ್ರೀನಿವಾಸ್, ವಿ ಎನ್ ಕೃಷ್ಣ ಇದ್ದರು.

ವಿವಿಧ ಬಡಾವಣೆಯ 150ಕ್ಕೂ ಹೆಚ್ಚು ಮಂದಿ ನೋಂದಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.