ಹಲವು ಪೋಷಕರು ತಮ್ಮ ಬೈಕ್‌ಗಳಲ್ಲಿ ವಿದ್ಯಾರ್ಥಿಗಳನ್ನು ಶಾಲಾ ಕಾಲೇಜಿಗೆ ಬಿಟ್ಟು ಬಂದರು. ಮಾವಿನಹಳ್ಳಿ, ಗುಮಚನಹಳ್ಳಿ, ಬೆಟ್ಟದಬಿಡು ಗ್ರಾಮಗಳಿಂದ ವಿದ್ಯಾರ್ಥಿಗಳು ನಡೆದುಕೊಂಡೆ ಶಾಲೆಗೆ ಬಂದರು. ಎಚ್.ಡಿ ಕೋಟೆ ಕಡೆಯಿಂದ ಜಯಪುರ ಮಾರ್ಗವಾಗಿ ಮೈಸೂರಿಗೆ ತೆರಳುವ ಬಸ್‌ಗಳಲ್ಲಿ ನಿಲ್ಲಲು ಜಾಗವಿಲ್ಲದಷ್ಟು ಪ್ರಯಾಣಿಕರಿಂದ ತುಂಬಿಕೊಂಡಿದ್ದವು. ಹಲವರು ಬಸ್ ಬಾಗಿಲಲ್ಲಿಯೇ ನೇತಾಡಿಕೊಂಡು ಪ್ರಯಾಣಿಸಿದರು.