ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿ ಕೊರೆಸುವ ವಿರುದ್ಧ ಅಭಿಯಾನ

ಜಾಗೃತಿ ಪತ್ರ ಹಂಚಿದ ಶ್ರೀರಾಂಪುರ ಬಡಾವಣೆ ನಿವಾಸಿಗಳು
Published 24 ಏಪ್ರಿಲ್ 2024, 16:19 IST
Last Updated 24 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ಮೈಸೂರೂ: ಪ್ರೊ.ರಂಗಪ್ಪ ಬಡಾವಣೆಯಲ್ಲಿ ನಿರಂತರವಾಗಿ ಕೊಳವೆಬಾವಿ ಕೊರೆಯುವುದನ್ನು ಗಮನಿಸಿದ ಶ್ರೀರಾಂಪುರ ಮೂರನೇ ಹಂತದ ನಿವಾಸಿಗಳು, ಕೊಳವೆಬಾವಿ ಕೊರೆಸುವುದರಿಂದ ಉಂಟಾಗುವ ಅನಾಹುತದ ಬಗ್ಗೆ ಭಿತ್ತಿಪತ್ರ ಹಂಚಿ ಜಾಗೃತಿ ಮೂಡಿಸಿದರು.

ಬಡಾವಣೆಯ ನಿವಾಸಿ ಚೇತನ್‌ ದಾಸ್‌ ಮಾತನಾಡಿ, ‘ನಮ್ಮ ಬಡಾವಣೆಯ ಮುಂಭಾಗದಲ್ಲಿರುವ ಪ್ರೊ.ರಂಗಪ್ಪ ಬಡಾವಣೆಯಲ್ಲಿ 83 ಸೈಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಲಾಗಿದೆ. ಆದರೆ, ಬಿಲ್ಡರ್ಸ್‌ ಇಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ. ವಿದ್ಯುತ್‌, ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಹೊಸ ಮನೆ ಕಟ್ಟಿಸಿಕೊಳ್ಳುವವರು ಮನೆಗೊಂದರಂತೆ ಕೊಳವೆಬಾವಿ ಕೊರೆಸಲು ಆರಂಭಿಸಿದ್ದಾರೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುವ ಭೀತಿ ಎದುರಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈಗಾಗಲೇ 10 ಕಡೆ ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಅದನ್ನು ನಿಲ್ಲಿಸುವಂತೆ ಮನವಿ ಮಾಡುವ ಪೋಸ್ಟರ್‌ಗಳನ್ನು ಬಡಾವಣೆಯಲ್ಲಿ ಅಂಟಿಸಿದ್ದೇವೆ. ಮುಂದೆ ಕೊಳವೆಬಾವಿ ಕೊರೆಸಲು ಮುಂದಾದರೆ ಅದನ್ನು ತಡೆಯುವ ಕೆಲಸ ಮಾಡಲಿದ್ದೇವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT