ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೃತ್ತಿ ಮಾರ್ಗದರ್ಶನ ಅಗತ್ಯ: ಸಿ.ಜಿ. ಬೆಟಸೂರಮಠ

Published : 14 ಸೆಪ್ಟೆಂಬರ್ 2024, 15:50 IST
Last Updated : 14 ಸೆಪ್ಟೆಂಬರ್ 2024, 15:50 IST
ಫಾಲೋ ಮಾಡಿ
Comments

ಮೈಸೂರು: ‘ಬೆಟ್‌ಕೆರೂರ್‌ ದಂಪತಿ ಉದಾರ ಮನೋಭಾವವುಳ್ಳ ದಾನಿಗಳು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಈ ದತ್ತಿನಿಧಿ ಸ್ಥಾಪಿಸಿದ್ದಾರೆ. ಅವರ ನಿಸ್ವಾರ್ಥ ಸೇವೆ ಶ್ಲಾಘನೀಯವಾದದ್ದು’ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ. ಬೆಟಸೂರಮಠ ಹೇಳಿದರು.

ಡಾ. ವಸಂತ್‌ ಬೆಟ್‌ಕೆರೂರ್‌ ಮತ್ತು ಡಾ. ಮಂಗಳ ಬೆಟ್‌ಕೆರೂರ್‌ ಅ‌ವರು ಸ್ಥಾಪಿಸಿರುವ ದತ್ತಿನಿಧಿಯ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಉತ್ತಮ ಜೀವನ ನಡೆಸಬೇಕು. ಆಗ ಅದೇ ದತ್ತಿದಾನಿಗಳಿಗೆ ಅವರು ಸಲ್ಲಿಸಬಹುದಾದ ಕೃತಜ್ಞತೆ’ ಎಂದರು.

ದತ್ತಿದಾನಿ ಡಾ. ಮಂಗಳ ಬೆಟ್‌ಕೆರೂರ್‌ ಮಾತನಾಡಿ, ‘ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವಾಗಲೇ ವೃತ್ತಿ ಮಾರ್ಗದರ್ಶನ ಸಿಗಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯದ ನಿರ್ಧಾರಗಳಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಡಾ. ಬಿ. ಸುರೇಶ್‌, ಡಾ. ಜಯದೇವ ಬೆಟ್‌ಕೆರೂರ್‌ ಮಾತನಾಡಿದರು. ದತ್ತಿ ದಾನಿಗಳಾದ ಡಾ. ವಸಂತ್‌ ಬೆಟ್‌ಕೆರೂರ್‌, ಮಕ್ಕಳಾದ ಅನುಪಮಾ, ನಿವೇದಿತಾ ಮತ್ತು ಕವಿತಾ ಅವರು ಆನ್‌ಲೈನ್‌ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸುನೀತಾ ಬೆಟ್‌ಕೆರೂರ್‌, ಉಮಾ ಬೆಟ್‌ಕೆರೂರ್‌ ಕಾರ್ಯಕ್ರಮದಲ್ಲಿ ಇದ್ದರು. ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್‌. ಮಹೇಶ್‌, ಪ್ರಾಂಶುಪಾಲ ಡಾ.ಎಂ. ಪ್ರಭು, ಮಾನಸ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT