ಪಿರಿಯಾಪಟ್ಟಣ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ನೇರಳೆಕುಪ್ಪೆ ನವೀನ್ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

‘ಮಹಿಳೆಯ ದೂರದ ಸಂಬಂಧಿಯಾಗಿರುವ ಆರೋಪಿಯು, ಆಕೆಯ ಪತಿಗೆ ಅವರ ಮನೆಯಲ್ಲೇ ಮದ್ಯಪಾನ ಮಾಡಿಸಿ, ಆತ ಎಚ್ಚರ ತಪ್ಪಿದ ನಂತರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಯು ಸಂಬಂಧಿಯಾಗಿರುವುದರಿಂದ ಸಂಧಾನ ಮಾಡೋಣ ಎಂದು ಪತ್ನಿಯನ್ನು ಪತಿ ಸಮಾಧಾನಪಡಿಸಿದ್ದರು. ‘ಯಾವುದೇ ಕ್ರಮ ಆಗದಿದ್ದರಿಂದ ಶುಕ್ರವಾರ ತಡವಾಗಿ ದೂರು ನೀಡುತ್ತಿದ್ದೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.