ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ ಅರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಮಂಡಕಳ್ಳಿ ನಿವಾಸಿಗಳಾದ ವಿವೇಕ್ ಹಟ್ಟಿ, ಸುಮಾ, ಅನಿತಾ, ಪುಷ್ಪಾ ವಿರುದ್ಧ ಪಾಂಡವಪುರದ ನಿವಾಸಿ ಎಂ.ವಿ. ಕಿಶೋರ್ ದೂರು ನೀಡಿದ್ದು, ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಮೃತಪಟ್ಟ ತಂದೆ ಬದುಕಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಮಾರಾಟ ಮಾಡಿದ ಆರೋಪದ ಮೇಲೆ ಅವರ ವಿರುದ್ಧ ದೂರ ಬಂದಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮಂಡಕಳ್ಳಿಯಲ್ಲಿ ನನ್ನ ತಾತ ಪತ್ರಪ್ಪ ಅವರಿಗೆ ಸೇರಿದ 4.19 ಎಕರೆ ಜಮೀನನ್ನು ದೊಡ್ಡಪ್ಪ ಪ್ರಭುದೇವ್ ನಮ್ಮ ಗಮನಕ್ಕೆ ತಾರದೆ ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಅಲ್ಲದೇ ಅದನ್ನು ನೀಲಕಂಠ್ ನರಸಿಂಹನ್ ಶರ್ಮನ್ ಎಂಬುವವರಿಗೆ ಮಾರಿದ್ದರು. ಈ ಬಗ್ಗೆ ಕೋರ್ಟ್ ಮೊರೆ ಹೋಗಿದ್ದರಿಂದ ಜಮೀನಿನ ಮಾಲೀಕತ್ವವು ನನಗೆ ಬಂದಿತು. ಜಮೀನು ಪಡೆದಿದ್ದ ನರಸಿಂಹನ್ ಶರ್ಮನ್ ಕೂಡ ಹೈಕೋರ್ಟ್ ಮೊರೆ ಹೋದರು. ನಂತರದಲ್ಲಿ ಅವರು ಅಕಾಲಿಕವಾಗಿ ಮೃತಪಟ್ಟಿದ್ದರಿಂದ ಅವರ ಪುತ್ರ ವಿವೇಕ್ ಹಟ್ಟಿ ಕೋರ್ಟ್ನಲ್ಲಿ ಪ್ರಕರಣವನ್ನು ಹಿಂಪಡೆಯುವುದಾಗಿ ಹೇಳಿ ಪ್ರಕರಣ ಮುಕ್ತಾಯಗೊಳಿಸಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘2024ರಲ್ಲಿ ವಿವೇಕ್ ಹಟ್ಟಿ ಅವರು ತಮ್ಮ ತಂದೆ ಸಾವಿಗೀಡಾಗಿರುವ ವಿಚಾರವನ್ನು ಮುಚ್ಚಿಟ್ಟು ಅವರ ಹೆಸರಿನಲ್ಲಿ ತತ್ಕಾಲ್ ಪೋಡಿ ಪಡೆದರು. ಮೃತ ವ್ಯಕ್ತಿ ನರಸಿಂಹನ್ ಶರ್ಮನ್ ಎಂಬುದಾಗಿ ಬೇರೊಬ್ಬ ವ್ಯಕ್ತಿಯನ್ನು ಕರೆ ತಂದು ಆಸ್ತಿಯನ್ನು ಮೂವರು ಉದ್ಯಮಿಗಳಿಗೆ ಮಾರಿ ವಂಚಿಸಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.