ನಂಜನಗೂಡು: ಒಳ ಮೀಸಲಾತಿ ಹೋರಾಟಗಾರರನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದ ಅಂಬೇಡ್ಕರ್ ಭವನದ ಮುಂದೆ ಮಂಗಳವಾರ ಒಳಮೀಸಲಾತಿ ಹೋರಾಟ ಸಮಿತಿ ಮುಖಂಡರು ಚಪ್ಪಲಿಯಿಂದ ಹೊಡೆದುಕೊಂಡು ಪ್ರತಿಭಟಿಸಿದರು.

ತಿ.ನರಸೀಪುರದ ಗೋಪಾಲಪುರದಲ್ಲಿ ಬಿ.ರಾಚಯ್ಯ ಪ್ರತಿಮೆ ಬಳಿ ಒಳ ಮೀಸಲಾತಿ ವರದಿ ಸಂಪೂರ್ಣ ಜಾರಿಗೊಳಿಸುವಂತೆ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು ನಂಜನಗೂಡಿನ ಅಂಬೇಡ್ಕರ್ ಭವನದಲ್ಲಿ ಇರಿಸಿದ್ದರು. ಈ ವೇಳೆ ಪೊಲೀಸರೊಬ್ಬರು ಹೋರಾಟಗಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ಆರೋಪಿಸಿದರು.

ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಭಾಸ್ಕರ್ ಪ್ರಸಾದ್ ಮಾತನಾಡಿ, ‘ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ಸಮಿತಿ ಸದಸ್ಯರನ್ನು ಬಂಧಿಸಿದ ಪೊಲೀಸರು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಾದಿಗ ಒಳಮೀಸಲಾತಿ ಹೋರಾಟವನ್ನು ಹತ್ತಿಕ್ಕುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಭಾವಚಿತ್ರ ಹಾಕಿಕೊಂಡು ಚಪ್ಪಲಿಯಿಂದ ಹೊಡೆದುಕೊಂಡು ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರ ಪೊಲೀಸರನ್ನು ಬಳಸಿ ಹೋರಾಟಗಾರರನ್ನು ಬೆದರಿಸುತ್ತಿದೆ. ಅವಾಚ್ಯ ಶಬ್ದ ಬಳಸಿದ ಪೊಲೀಸ್ ಅಧಿಕಾರಿ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.

ಪೊಲೀಸರು ಕ್ಷಮೆ ಕೇಳಬೇಕು ಎಂದು ಪ್ರತಿಭಟನಕಾರರು ಪಟ್ಟುಹಿಡಿದು, ಸಿ.ಪಿ.ಐ. ಆನಂದ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಸುರೇಶ್, ನಾಗರಾಜು, ರಾಹುಲ್, ಮಹದೇವಯ್ಯ, ಮಂಜುನಾಥ್, ಪುಟ್ಟಣ್ಣ, ಮಹದೇವಸ್ವಾಮಿ, ಹನುಮೇಶ್, ವಿನೋದ್, ಅವಿನಾಶ್ ಉಪಸ್ಥಿತರಿದ್ದರು.

ತಿ.ನರಸೀಪುರದಲ್ಲಿ ಪ್ರತಿಭಟನಕಾರರ ಬಂಧನಕ್ಕೆ ಆಕ್ರೋಶ | ಪೊಲೀಸರೊಂದಿಗೆ ಮಾತಿನ ಚಕಮಕಿ ಕ್ಷಮೆ ಕೇಳಲು ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.