ಪಿರಿಯಾಪಟ್ಟಣ: ಕೇಂದ್ರ ಅಬಕಾರಿ (ತಿದ್ದುಪಡಿ) ವಿಧೇಯಕ 2025ದಿಂದ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಲ್ಲಿನ ಹಠಾತ್ ಹೆಚ್ಚಳವಾಗುವುದರಿಂದ ತಂಬಾಕು ಬೆಳೆಗಾರರಲ್ಲಿ ತಂಬಾಕು ಬೆಲೆ ಕುಸಿತವಾಗುವ ಆತಂಕದಿಂದ ರಾಜ್ಯ ವರ್ಜೀನಿಯಾ ತಂಬಾಕು ಬೆಳೆಗಾರರ ಸಂಘಗಳ ಒಕ್ಕೂಟದದಿಂದ ಸೋಮವಾರ ಪ್ರತಿಭಟನೆ ನಡೆಯಿತು. ನಂತರ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಅಧ್ಯಕ್ಷ ಎಚ್.ಜಿ. ಪರಮೇಶ್ ಮಾತಾನಾಡಿ, ತಗ್ಗುತ್ತಿರುವ ರಫ್ತು ಆದಾಯ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಮತ್ತು ನಿಯಂತ್ರಕ ಮಿತಿಗಳಿಂದಾಗಿ ಕುಗ್ಗುತ್ತಿರುವ ಕೃಷಿ ಪ್ರದೇಶಗಳಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಅತಿಯಾದ ತೆರಿಗೆಯು ಅಕ್ರಮ ಸಿಗರೇಟ್ ವ್ಯಾಪಾರವನ್ನು ವಿಸ್ತರಿಸಿದೆ ಮತ್ತು ಸರ್ಕಾರದ ಬೊಕ್ಕಸಕ್ಕೆ ಆದಾಯ ನಷ್ಟವನ್ನು ಉಂಟುಮಾಡಿದೆ. ಪ್ರಸ್ತುತ ತೆರಿಗೆ ಹೆಚ್ಚಳವು ಗ್ರಾಹಕರನ್ನು ಕಳ್ಳಸಾಗಣೆ ಮತ್ತು ಅಕ್ರಮ ಉತ್ಪನ್ನಗಳನ್ನು ಬಳಸುವಂತೆ ಮಾಡಿದೆ. ಇದು ನೇರವಾಗಿ ಭಾರತೀಯ ರೈತರಿಗೆ ಹಾನಿ ಮಾಡುತ್ತದೆ ಮತ್ತು ವಿದೇಶಿ ಉತ್ಪಾದಕರಿಗೆ ಪ್ರಯೋಜನವಾಗಿದೆ ಎಂದು ದೂರಿದರು.

ರೈತರ ಜೀವನೋಪಾಯವನ್ನು ರಕ್ಷಿಸಲು ಮತ್ತು ಕಳ್ಳಸಾಗಣೆಯನ್ನು ತಡೆಯಲು, ಸರ್ಕಾರವು ಅತಿಯಾದ ತೆರಿಗೆ ಏರಿಕೆಯನ್ನು ಹಿಂಪಡೆಯಬೇಕು ಮತ್ತು ಆದಾಯ ತಟಸ್ಥ ದರಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಫೆ. 1 ರಿಂದ ಜಾರಿಗೆ ಬರುವಂತೆ ಸಿಗರೇಟಿನ ಉದ್ದವನ್ನು ಅವಲಂಬಿಸಿ ಪ್ರತಿ 1,000 ಸಿಗರೇಟ್ ಗಳಿಗೆ ₹2050 ರಿಂದ ₹8,500 ವರೆಗೆ ಅಬಕಾರಿ ಸುಂಕವನ್ನು ವಿಧಿಸಿರುವ ನಿಯಮಗಳ ಬಗ್ಗೆ ಒಕ್ಕೂಟವು ಆತಂಕ ವ್ಯಕ್ತಪಡಿಸುತ್ತಿದೆ ಎಂದರು.

ಕರ್ನಾಟಕ ಮತ್ತು ಆಂಧ್ರಪ್ರದೇಶದ ಎಫ್ಸಿವಿ ತಂಬಾಕು ಬೆಳೆಗಾರರ ವಿರುದ್ಧ ಭಾರತದ ತಂಬಾಕು ತೆರಿಗೆ ಪದ್ಧತಿಯು ಈಗಾಗಲೇ ತಾರತಮ್ಯದಿಂದ ಕೂಡಿದೆ. ಬೀಡಿ ಮತ್ತು ಅಗಿಯುವ ತಂಬಾಕಿಗೆ ಹೋಲಿಸಿದರೆ ಎಫ್ಸಿವಿ ತಂಬಾಕಿನ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಪ್ರಸ್ತುತ ಅಬಕಾರಿ ಏರಿಕೆಯು ಈ ಆರ್ಥಿಕ ತಾರತಮ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಮತ್ತು ಎಫ್ಸಿವಿ ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಕೆ. ಹೊಲದಪ್ಪ, ಮುತ್ತುರಾಜು, ಶಂಕರೇಗೌಡ, ರವಿ, ವಿಕ್ರಂರಾಜೇ ಅರಸ್, ವಿಶ್ವನಾಥ್,ಮಹದೇವ್, ಚಂದ್ರು,ಫಾರ್ಹನ್, ಮಹೇಂದ್ರ, ರಮೇಶ್, ಮಹೇಶ್, ಕರುಣಾಕರ್ ಸೇರಿದಂತೆ ಇತರರಿದ್ದರು.

‘ಕೆಟ್ಟ ಪರಿಣಾಮ ಬೀರಲಿದೆ’

ಹೊಸ ಜಿಎಸ್ಟಿ ಪದ್ಧತಿಯನ್ನು ಘೋಷಿಸುವಾಗ ಮತ್ತು ಸಂಸತ್ತಿನಲ್ಲಿ ಕೇಂದ್ರ ಅಬಕಾರಿ (ತಿದ್ದುಪಡಿ) ಕಾಯಿದೆಯ ಬಗ್ಗೆ ಚರ್ಚಿಸುವಾಗ ತೆರಿಗೆ ವ್ಯವಸ್ಥೆಯ ಬದಲಾವಣೆಯು 'ರೆವೆನ್ಯೂ ನ್ಯೂಟ್ರಲ್' (ಆದಾಯ ತಟಸ್ಥ) ಆಗಿರುತ್ತದೆ ಎಂದು ಸರ್ಕಾರವು ಭರವಸೆ ನೀಡಿತ್ತು. ಆದರೆ ಈಗ ಮಾಡಲಾಗಿರುವ ತೆರಿಗೆ ಏರಿಕೆಯು ಸರ್ಕಾರದ ಭರವಸೆಗೆ ವಿರುದ್ಧವಾಗಿದೆ ಎಂದರು. ಇದರಿಂದ ದೇಶೀಯ ಸಿಗರೇಟ್ ತಯಾರಕರು ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ ಇದು ಮಾರಾಟದ ಕುಸಿತಕ್ಕೆ ಕಾರಣವಾಗಿ ಅಂತಿಮವಾಗಿ ರೈತರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಎಚ್.ಜಿ. ಪರಮೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.