1984ರ ಏಪ್ರಿಲ್‌ನಲ್ಲಿ ಸಿದ್ದರಾಮಯ್ಯ ಅವರಿಗೆ ಮೈಸೂರಿನ ಜಯನಗರ– ತೊಣಚಿಕೊಪ್ಪಲು 2ನೇ ಹಂತದ ‘ಎಂ’ ಬ್ಲಾಕ್‌ನ ನಿವೇಶನ ಸಂಖ್ಯೆ 9ರಲ್ಲಿ 50X80 ಚ.ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು. ಇದಕ್ಕಾಗಿ ಪ್ರತಿ ಚದರ ಗಜಕ್ಕೆ ₹30ರಂತೆ ಒಟ್ಟು ₹15,110 ದರವನ್ನು ನಿಗದಿಪಡಿಸಲಾಗಿತ್ತು. ಆದರೆ, ಈ ನಿವೇಶನಕ್ಕೆ ಬದಲಾಗಿ ಅದೇ ಬಡಾವಣೆಯ ‘ಜಿ’ ಮತ್ತು ‘ಎಚ್’ ಬ್ಲಾಕ್‌ನಲ್ಲಿ ಖಾಲಿ ಇರುವ ‘ನಿವೇಶನ ಸಂಖ್ಯೆ– 1245’ ಮಂಜೂರು ಮಾಡುವಂತೆ ಸಿದ್ದರಾಮಯ್ಯ ಕೋರಿದ್ದರು.