ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಮುಂದಾಗಿ: ಮೈಸೂರು ಕನ್ನಡ ವೇದಿಕೆ

Published : 17 ಆಗಸ್ಟ್ 2024, 14:26 IST
Last Updated : 17 ಆಗಸ್ಟ್ 2024, 14:26 IST
ಫಾಲೋ ಮಾಡಿ
Comments

ಮೈಸೂರು: ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು’ ಎಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಹಳೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

‘ಅತ್ಮ ರಕ್ಷಣೆಗಾಗಿ ಓಡಿ ಬಂದ ಶೇಖ್ ಹಸೀನಾ ಭಾರತದಲ್ಲಿ ಸೂಕ್ತ ಭದ್ರತೆಯಲ್ಲಿರುವಾಗ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಅಭದ್ರತೆಯ ನೆರಳಲ್ಲಿ ಬದಕುತ್ತಿರುವುದು ದುರ್ದೈವದ ಸಂಗತಿ. ಈಗಾಗಲೇ ಬಾಂಗ್ಲಾದೇಶದಲ್ಲಿ ಶೇ 8ಕ್ಕೆ ಕುಸಿದಿರುವ ಹಿಂದೂಗಳ ಜನಸಂಖ್ಯೆ, ಇದೇ ಪರಿಸ್ಥಿತಿ ಮುಂದುವರೆದು ಕಣ್ಮರೆಯಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ  ಭಾರತ ಸರ್ಕಾರ ಎಚ್ಚೆತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಪ್ರಸ್ತಾಪಿಸಬೇಕು’ ಎಂದು ಒತ್ತಾಯಿಸಿದರು.

ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಮಹದೇವಸ್ವಾಮಿ, ಪ್ಯಾಲೇಸ್‌ ಬಾಬು, ಗೋಪಿ, ಸುನೀಲ್, ಎಲ್ಐಸಿ ಸಿದ್ದಪ್ಪ, ಗೋವಿಂದರಾಜು, ಬೀಡಾ ಬಾಬು, ಸ್ವಾಮಿ ಗೈಡ್, ಮಾದಪ್ಪ, ಕಾವೇರಮ್ಮ, ಪುಷ್ಪ, ಮಾಲಿನಿ, ಹರೀಶ್, ಕಿಶೋರ್, ಶ್ರೀನಿವಾಸ್, ಮದನ್, ಸ್ವಾಮಿ, ಬಸವರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT