ಮೈಸೂರು: ‘ನನ್ನ ಜಾತಿ, ಶಾಸಕ ಕೆ.ಹರೀಶ್ಗೌಡರ ಜಾತಿ ಯಾವುದೆಂಬುದು ಮುಖ್ಯವಲ್ಲ, ಸೌಹಾರ್ದಯುತವಾಗಿ ಬದುಕುವುದು ಮುಖ್ಯ’ ಎಂದು ಶಾಸಕ ತನ್ವೀರ್ ಸೇಠ್ ಪ್ರತಿಪಾದಿಸಿದರು.

ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಸಮಿತಿಯು ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಬುಧವಾರ ಆಯೋಜಿಸಿದ್ದ ಧರ್ಮಸ್ಥಳ ಕ್ಷೇತ್ರ ಯಾತ್ರೆ ಉದ್ಘಾಟಿಸಿ ಮಾತನಾಡಿದರು.

‘ಹಿಂದೂ, ಮುಸ್ಲಿಮರು ಭಾವೈಕ್ಯತೆಯಿಂದ ಇದ್ದಾರೆ. ಆದರೆ, ಈ ವಿಚಾರದಲ್ಲಿ ರಾಜಕಾರಣ ಸಲ್ಲದು. ಬಿಜೆಪಿ ಸಾವಿನ ಮನೆಯಲ್ಲಿ ಬೆಂಕಿ ಕಾಯಿಸುವ ಕೆಲಸ ಮಾಡುತ್ತಿದೆ’ ಎಂದು ಟೀಕಿಸಿದರು.

‘ಧರ್ಮಸ್ಥಳ ಕ್ಷೇತ್ರದ ಕೋಟ್ಯಂತರ ಭಕ್ತರ ಭಾವನೆಗಳಿಗೆ ಘಾಸಿ ಮಾಡಬಾರದು. ಈಗ ಯಾತ್ರೆ ಆರಂಭಿಸಿರುವುದು ರಾಜಕೀಯವಲ್ಲ. ಇದರಿಂದ ತನಿಖೆ ಮೇಲೆ ಪರಿಣಾಮವಾಗದು’ ಎಂದರು.

ಶಾಸಕ ಕೆ.ಹರೀಶ್ ಗೌಡ ಅವರು, ‘ಎಲ್ಲಾ ಜಾತಿ ಧರ್ಮದ ಜನ ಒಟ್ಟಾಗಿ ಈ ಯಾತ್ರೆ ಮಾಡುತ್ತಿದ್ದೇವೆ. ನಾವು ದೇವಸ್ಥಾನ, ಮಸೀದಿಗಳಿಗೆ ಹೋಗುತ್ತೇವೆ. ನಮಗೆ ಭೇದ– ಭಾವವಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.