ಜಯಪುರ: ಪರಿಶಿಷ್ಟ ಸಮುದಾಯದ ಗುತ್ತಿಗೆದಾರನಿಗೆ ಜಾತಿ ನಿಂದನೆ ಮಾಡಿರುವ ಬೆಂಗಳೂರು ಆರ್.ಆರ್. ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಜೈ ಭೀಮ್ ಯುವಪಡೆ ಸಂಘಟನೆ ರಾಜ್ಯಾಧ್ಯಕ್ಷ ಮಾವಿನಹಳ್ಳಿ ರವಿ, ಕಾರ್ಯಧ್ಯಕ್ಷ ಮಂಡಕಳ್ಳಿ ಚಾಮರಾಜು ಅವರು ಜಯಪುರ ಠಾಣೆಗೆ ದೂರು ನೀಡಿದರು
ಮುನಿರತ್ನ ರವರ ಮೇಲೆ ಬೆಂಗಳೂರಿನ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿ, ಬಂಧನವಾಗಿದೆ.ಕರ್ನಾಟಕ ಜೈ ಭೀಮ್ ಸಂಘಟನೆಯ ಸದಸ್ಯರು ನೀಡಿದ ದೂರನ್ನು ಸ್ವೀಕರಿಸಲಾಗಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಜಯಪುರ ಠಾಣಾ ಪಿಎಸ್ಐ ಪ್ರಕಾಶ್ ಯತ್ತಿನಮನಿ ಯವರು ಪ್ರಜಾವಾಣಿ ಗೆ ತಿಳಿಸಿದರು.