ಮೈಸೂರು: ಸಮಾನತೆಯ ಸಂದೇಶ ಸಾರುವ ಸದಾಶಯದೊಂದಿಗೆ ಕೋಲಾರದ ಬೀರಮಾನಹಳ್ಳಿ ಶ್ರೀನಿವಾಸ್ ಕೋಲಾರದಿಂದ ಮೈಸೂರಿಗೆ 12 ತಾಸಿನಲ್ಲಿ ಸೈಕಲ್ನಲ್ಲಿ ಕ್ರಮಿಸಿ ದಾಖಲೆ ಬರೆದರು.

ಗ್ಲೋಬಲ್ ವರ್ಲ್ಡ್ ರೆಕಾರ್ಡ್ (ಜಿಡಬ್ಲ್ಯುಆರ್) ಸಂಸ್ಥೆಯ ಸಹಯೋಗದಲ್ಲಿ 12 ಗಂಟೆ ಅತಿ ವೇಗದ ಸೈಕ್ಲಿಂಗ್ ಮಾಡುವ ಮೂಲಕ ಶ್ರೀನಿವಾಸ್ ತಮ್ಮ ಹೆಸರಿಗೆ ದಾಖಲೆ ಬರೆದರು. ಕೋಲಾರದ ತೇರಹಳ್ಳಿ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಶುಕ್ರವಾರ ರಾತ್ರಿ ಸೈಕಲ್ನಲ್ಲಿ ಹೊರಟ ಅವರು ಶನಿವಾರ ಬೆಳಿಗ್ಗೆ 10ಕ್ಕೆ ಮೈಸೂರಿನ ಟೌನ್ಹಾಲ್ ತಲುಪಿದ್ದು, ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ದಲಿತ ಸಂಘರ್ಷ ಸಮಿತಿಯ ಸದಸ್ಯರು ಈ ಸಂದರ್ಭ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ, ‘ಶ್ರೀನಿವಾಸ್ ಸಮಾನತೆ ಸಂದೇಶ ಹೊತ್ತು ಸೈಕಲ್ ಸವಾರಿಯ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಪ್ರಸ್ತುತ ಭಾರತ ಬುದ್ಧ ಬಯಸಿದ ಭಾರತ ಆಗಿಲ್ಲ. ಜಾತಿ-ಧರ್ಮಗಳ ಮಧ್ಯೆ ಕಂದಕ ಜಾಸ್ತಿ ಆಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಸಮಾನತೆಯ ಕನಸನ್ನು ಹೊತ್ತು ಸೈಕಲ್ ತುಳಿಯುತ್ತಿರುವುದು ಜನ ಮೆಚ್ಚಬೇಕಾದ ಕೆಲಸ. ಅಂಬೇಡ್ಕರ್ ಚಿಂತನೆಗಳಂತೆ ದೇಶ ಸಾಗಬೇಕು’ ಎಂದು ಆಶಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಸಂಘಟನ ಸಂಚಾಲಕ ಶಂಭುಲಿಂಗಸ್ವಾಮಿ, ಕಲ್ಲಳ್ಳಿ ಕುಮಾರ್, ಬಿ.ಡಿ.ಶಿವಬುದ್ಧಿ, ಹೆಗ್ಗನೂರು ಲಿಂಗರಾಜು, ಹುಣಸೂರು ರಾಮಕೃಷ್ಣ, ರಾಜು, ಎಚ್.ಡಿ.ಕೋಟೆ ಮಹೇಶ್, ಸಿದ್ದರಾಜು, ದಾಸಯ್ಯ, ಸರಗೂರು ಕಾಳಸ್ವಾಮಿ, ರಾಜು ಕುಕ್ಕೂರು, ಚಂದ್ರಶೇಖರ್, ಸೋಮಶೇಖರ್, ತಿಮ್ಮೇಗೌಡ, ಆಪ್ಸರ್ ಅಹಮ್ಮದ್, ಪ್ರಕಾಶ್, ವಿಶ್ವನಾಥ್ ಇದ್ದರು.

ಸಚಿವರ ಭೇಟಿ: ಇದಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರ ನಿವಾಸಕ್ಕೆ ತೆರಳಿದ ಶ್ರೀನಿವಾಸ್ ಅವರನ್ನು ಸಚಿವರು ಹೂಗುಚ್ಛ ನೀಡಿ ಅಭಿನಂದಿಸಿದರು.

ಜಿಡಬ್ಲ್ಯುಆರ್ ಸಂಸ್ಥೆ ಮುಖ್ಯಸ್ಥೆ ಪೂಜಾ, ಸೈಕ್ಲಿಂಗ್ ಸಹಾಯಕರಾದ ಸುಹಾಸ್, ಸುಜೀತ್, ಮುಖಂಡರಾದ ಮುರುಡಗಳ್ಳಿ ಮಂಜು, ನಿಂಗರಾಜು ಬೇರಂಬಾಡಿ ಇದ್ದರು.

ವಿವಿಧ ಯಾತ್ರೆ ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ 59ರ ಹರೆಯದ ಶ್ರೀನಿವಾಸ್ ಕಳೆದ 43 ವರ್ಷದಿಂದ ಸೈಕ್ಲಿಂಗ್ನಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದಾದ್ಯಂತ 10500 ಕಿ.ಮೀ. ಉದ್ದಕ್ಕೆ ಸೈಕಲ್ ಜಾಥಾ ನಡೆಸಿದ್ದಾರೆ. ಕೋಲಾರಕ್ಕಾಗಿ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಕೋಲಾರದಿಂದ ಬೆಂಗಳೂರಿಗೆ ಹಾಗೂ ಕೋಲಾರದಿಂದ ನಾಗಪುರದ ಡಾ.ಬಿ.ಆರ್. ಅಂಬೇಡ್ಕರ್ ಪುಣ್ಯಭೂಮಿ ಮತ್ತು ದೆಹಲಿಗೆ ಜಾಥಾ ನಡೆಸಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಪತ್ರ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.