ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ಮುಂಭಾಗ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ‘ಪ್ರಜಾವಾಣಿ’ ಫೇಸ್‌ಬುಕ್ ಲೈವ್‌ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಕೋವಿಡ್–19 ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆ ಅರಮನೆ ಆವರಣಕ್ಕೆ ಅವಕಾಶ ಕಲ್ಪಿಸಿಲ್ಲ.

ಅ.23ರಂದು ಸಂಜೆ 7ರಿಂದ 8 ಗಂಟೆವರೆಗೆ ಮೈಸೂರಿನ ‘ಹೊನ್ನಾರು ಜನಪದ ಗಾಯಕರು’ ತಂಡದ ಡಾ.ಪಿ.ಕೆ.ರಾಜಶೇಖರ್ ಮತ್ತು ಸದಸ್ಯರಿಂದ ಜಾನಪದ ಗಾಯನ ಏರ್ಪಡಿಸಲಾಗಿದೆ. 8ರಿಂದ 9 ಗಂಟೆವರೆಗೆ ಮೈಸೂರಿನ ವಿದ್ವಾನ್ ಶಫೀಕ್ ಖಾನ್ (ಸಿತಾರ್), ವಿದ್ವಾನ್ ಕಾರ್ತಿಕ್ ನಾಗರಾಜ್ (ವಯಲಿನ್) ಮತ್ತು ತಂಡದವರು ಹಿಂದೂಸ್ತಾನಿ–ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್ ಬಂದಿ ನಡೆಸಿಕೊಡಲಿದ್ದಾರೆ. ಅ.24ರಂದು ಸಂಜೆ 7ರಿಂದ 9 ಗಂಟೆವರೆಗೆ ಬೆಂಗಳೂರಿನ ವಿದ್ವಾನ್ ಗಿರಿಧರ ಉಡುಪ ಮತ್ತು ತಂಡ ಲಯತರಂಗ ಕಾರ್ಯಕ್ರಮ ಪ್ರಸ್ತುತಪಡಿಸಲಿದೆ.

ಅಲ್ಲದೇ, ಅ.26ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂಸವಾರಿಯನ್ನು ಕೂಡ ‘ಪ್ರಜಾವಾಣಿ ಫೇಸ್‌ಬುಕ್ Fb.com/Prajavani.net ನಲ್ಲಿವರ್ಚುವಲ್ ಆಗಿ ವೀಕ್ಷಣೆ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.