ಮೈಸೂರು: ದಸರಾ ಮಹೋತ್ಸವ ಅಂಗವಾಗಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯು ಇಲ್ಲಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಅ.15ರಿಂದ 21ರವರಗೆ ನಡೆಯಲಿದೆ.

ಪುರುಷರಿಗಾಗಿ ರಾಜ್ಯ ಮಟ್ಟದ ದಸರಾ ಕಿಶೋರ (57ರಿಂದ 65 ಕೆ.ಜಿ), ದಸರಾ ಕೇಸರಿ (74ರಿಂದ 86 ಕೆ.ಜಿ), ದಸರಾ ಕಂಠೀರವ (86 ಕೆ.ಜಿ. ಮೇಲ್ಪಟ್ಟು) ಸ್ಪರ್ಧೆಗಳು ನಡೆಯಲಿವೆ. ಮೈಸೂರು ವಿಭಾಗ ಮಟ್ಟದಲ್ಲಿ ದಸರಾ ಕುಮಾರ್ ಹೆಸರಿನಲ್ಲಿ ಸ್ಪರ್ಧೆ ಆಯೋಜಿಸಿದ್ದು, 74 ಕೆಜಿ ಮೇಲ್ಪಟ್ಟವರು ಪಾಲ್ಗೊಳ್ಳಲಿದ್ದಾರೆ.

ಮಹಿಳೆಯರಿಗಾಗಿ ದಸರಾ ಕಿಶೋರಿ ಸ್ಪರ್ಧೆ ಇದ್ದು, 57ರಿಂದ 62 ಕೆ.ಜಿ. ಒಳಗಿನವರು ಸೆಣಸಲಿದ್ದಾರೆ. ವಿಜೇತರಿಗೆ ನಗದು ಬಹುಮಾನದ ಜೊತೆಗೆ ಬೆಳ್ಳಿ ಗದೆಯು ಉಡುಗೊರೆಯಾಗಿ ದೊರೆಯಲಿದೆ.

ದಸರಾ ಕುಸ್ತಿಯ ಪ್ರಮುಖ ಆಕರ್ಷಣೆಯಾದ ನಾಡ ಕುಸ್ತಿಯೂ ಇದೇ ಸಂದರ್ಭದಲ್ಲಿ ನಡೆಯಲಿದ್ದು, 210ಕ್ಕೂ ಹೆಚ್ಚು ಜೋಡಿಗಳು ಪಾಲ್ಗೊಳ್ಳುತ್ತಿವೆ. ನಿತ್ಯ 30 ಜೋಡಿಗಳು ಸೆಣಸಲಿವೆ. ವಿಜೇತರಿಗೆ ಸಾಹುಕಾರ್ ಚೆನ್ನಯ್ಯ ಕಪ್, ಮೈಸೂರು ಮಹಾರಾಜ ಒಡೆಯರ್ ಕಪ್ ಹಾಗೂ ಮೈಸೂರು ಮೇಯರ್ ಕಪ್ ಹೆಸರಿನಲ್ಲಿ ಪ್ರಶಸ್ತಿ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.