ನಂಜನಗೂಡು (ಮೈಸೂರು ಜಿಲ್ಲೆ): ತಾಲ್ಲೂಕಿನ ಗಟ್ಟವಾಡಿ ಗ್ರಾಮದ ಪರಿಶಿಷ್ಟ ಜಾತಿಯ ಮಹಿಳೆ ಶಶಿಕಲಾ (39) ಅವರ ಮೃತದೇಹವು ಗ್ರಾಮದ ನಂಜುಂಡಪ್ಪ ಅವರ ತೋಟದ ಬಾಳೆ ಗಿಡಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಕಂಡುಬಂದಿದೆ.
‘ತೋಟದ ಮಾಲೀಕರೇ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿ, ಆಕೆಯ ಸೋದರ ಮಹದೇವಯ್ಯ ಕವಲಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆರು ತಿಂಗಳ ಹಿಂದೆ, ಪತಿ ನಾಗರಾಜು ಮೃತಪಟ್ಟ ಬಳಿಕ ಮಹಿಳೆಯು ಸ್ವಗ್ರಾಮ ಗಟ್ಟವಾಡಿಯಲ್ಲಿ ತಂದೆಯೊಂದಿಗೆ ವಾಸವಾಗಿದ್ದರು. ಲೂನಾರ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದರು. ಪಿಎಸ್ಐ ಕೃಷ್ಣಕಾಂತ ಕೋಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತನಿಖೆ ನಡೆದಿದೆ.